ಚಾಲಕರ ನೇಮಕಾತಿಗಾಗಿ ಹೊರಗುತ್ತಿಗೆ ಮೂಲಕ ಟೆಂಡರ್ ಆಹ್ವಾನ

ಕಚೇರಿ ಕೆಲಸಕ್ಕೆ ಹೊರಗುತ್ತಿಗೆ ಆಧಾರದ ಮೇಲೆ ಬೆರಳಚ್ಚುಗಾರರು-1, ವಾಹನ ಚಾಲಕ -1, ಗ್ರೂಪ್ ಡಿ-1 ನೌಕರರನ್ನು ಒಂದು ವರ್ಷದ ಅವಧಿಗೆ ಹೊರಗುತ್ತಿಗೆ ಮೂಲಕ ಒದಗಿಸಲು ದರಪಟ್ಟಿಯನ್ನು ನೀಡಲು ಟೆಂಡರ್ ಆಹ್ವಾನಿಸಲಾಗಿದೆ.

ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿರುವ ಮಾನವ ಸಂಪನ್ಮೂಲ ಸಂಸ್ಥೆ, ಕಂಪನಿ, ಸಂಘ ಸಂಸ್ಥೆಗಳಿಂದ ಇ-ಪ್ರೊಕ್ಯೂರಮೆಂಟ್ ಮುಖಾಂತರ ಟೆಂಡರ್ ಆಹ್ವಾನಿಸಲಾಗಿದೆ.

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ ಹೆಚ್ಚುವರಿ ನಿರ್ದೇಶಕರ ಕಚೇರಿ, ಮಿನಿವಿಧಾನಸೌಧ, ಧಾರವಾಡ ಕಚೇರಿಯಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಆದೇಶ 1999-2000 ರ ಪ್ರಕಾರ ಅರ್ಜಿ ಸಲ್ಲಿಸಬಹುದು.

 ಟೆಂಡರ್ ಫಾರ್ಮ್‍ಗಳನ್ನು ಡಿಸೆಂಬರ್ 28 ಸಂಜೆ ಗಂಟೆಯವರೆಗೆ ಸಲ್ಲಿಸಬಹುದು.

ತಾಂತ್ರಿಕ ಟೆಂಡರ್‍ಗಳನ್ನು ಡಿಸೆಂಬರ್ 31 ಸಂಜೆ 4 ಗಂಟೆಗೆ ತೆರೆಯಲಾಗುವುದು.

ಆರ್ಥಿಕ ಬಿಡ್‍ಗಳನ್ನು ತಾಂತ್ರಿಕ ಬಿಡ್ ಅನುಮೋದನೆಯಾದ ನಂತರ ತೆರೆಯಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂ.ಸಂ: 0836-2441753 ಸಂಪರ್ಕಿಸಬಹುದೆಂದು ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!