ಮುಕ್ತ ವಿ.ವಿ. ಪದವಿ ಪ್ರವೇಶಾತಿ ಅವಧಿ ವಿಸ್ತರಣೆ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳು ದಂಡ ಶುಲ್ಕವಿಲ್ಲದೆ ಪ್ರವೇಶಾತಿ ನವೀಕರಿಸಿಕೊಳ್ಳಲು ಡಿಸೆಂಬರ್ 20 ರ ವರೆಗೆ ಅವಧಿ ವಿಸ್ತರಿಸಲಾಗಿದೆ.

2022-23 ರ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಲ್ಲಿ ದ್ವಿತೀಯ, ತೃತೀಯ, ಬಿಎ, ಬಿಕಾಂ, ಬಿಬಿಎ, ಬಿಸಿಎ, ಬಿ.ಎಸ್ಸಿ (ಜನರಲ್), ಬಿಎಸ್ಸಿ (ಹೋಮ್‍ಸೈನ್ಸ್), ಬಿ.ಎಸ್ಸಿ (ಐಟಿ) ಮತ್ತು ಅಂತಿಮ ಎಂಎ/ಎಂಕಾಂ/ಎಂಬಿಎ ಮತ್ತು ಎಂ.ಎಸ್ಸಿ ಪದವಿಗಳಿಗೆ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಇದು ಅನ್ವಯಿಸುತ್ತದೆ.

ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ಅಂತರ್ಜಾಲ https://www.ksoumysuru.ac.in ನಲ್ಲಿ ವೀಕ್ಷಿಸಬಹುದು ಹಾಗೂ ಸಹಾಯವಾಣಿ ಕೇಂದ್ರದ ಇ-ಮೇಲ್ techsupport@ksouportal.com ಗೆ ಸಂಪರ್ಕಿಸಬಹುದು.

ಅಥವಾ ಮೊಬೈಲ್ ಸಂಖ್ಯೆ : 8800335638 ಅನ್ನು ಸಂಪರ್ಕಿಸಬಹುದೆಂದು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!