ಡಿ.16 ಮತ್ತು 23 ರಂದು ಮರ ಹರಾಜು

ಧಾರವಾಡ ಜಿಲ್ಲೆಯ ಕಲಘಟಗಿ ವಲಯದ ಕೆ.ಎಮ್.ಸಿ ರಸ್ತೆಯ ವಡ್ಡರ ಓಣಿಯ ರಸ್ತೆ ಪಕ್ಕದಲ್ಲಿ ಅಪಾಯಕಾರಿ ಸ್ಧಿತಿಯಲ್ಲಿ 06 ಮರ ಗಳನ್ನು ಹರಾಜು ಮಾಡಲಾಗುವುದು.

ವಲಯ ಅರಣ್ಯ ಅಧಿಕಾರಿ ಕಲಘಟಗಿರವರ ಕಛೇರಿಯಲ್ಲಿ ಡಿಸೆಂಬರ್ 16 ಮತ್ತು 23, 2022 ರಂದು ಮಧ್ಯಾಹ್ನ 3 ಗಂಟೆಗೆ ಬಹಿರಂಗ ಹರಾಜು ಮಾಡಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.

ಮರ ಸಂರಕ್ಷಣಾ ಕಾಯ್ದೆ 1976 ರ ಸೆಕ್ಷನ್ 8 (3) (ಗಿII) ರಲ್ಲಿ ಅಗತ್ಯ ಪಡಿಸಿರುವಂತೆ, ಈ ಬಗ್ಗೆ ತಕರಾರು ಸಲ್ಲಿಸಬಯಸುವರು ತಮ್ಮ ತಕರಾರನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಧಾರವಾಡ ಇವರಿಗೆ ಸಲ್ಲಿಸಬಹುದು.

ಉಪ ವಿಭಾಗ ಧಾರವಾಡ ಹಾಗೂ ಅಧಿಕಾರಿಯವರಿಗೆ ಅರಣ್ಯ ಸಂಕೀರ್ಣ ಕೆ.ಸಿ.ಪಾರ್ಕ ಎದುರು ಧಾರವಾಡ ಕಛೇರಿಯಲ್ಲಿ ಲಿಖಿತ ರೂಪದಲ್ಲಿ ಕಛೇರಿ ವೇಳೆಯಲ್ಲಿ ಡಿಸೆಂಬರ್ 13 ರ ಒಳಗಾಗಿ ಸಲ್ಲಿಸಬಹುದು.

ಒಂದು ವೇಳೆ ನಿಗದಿತ ದಿನಾಂಕದೋಳಗೆ ತಕರಾರು ಸಲ್ಲಿಸದಿದ್ದರೆ ನಂತರ ಬಂದ ತಕರಾರುಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಧಾರವಾಡ ಉಪವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!