ಜಲಧಾರೆಗಳ ವೀಕ್ಷಣೆಗೆ ಧಾರವಾಡದಿಂದ ವಿಶೇಷ ಸಾರಿಗೆ ಸೌಲಭ್ಯ

ಮಳೆಗಾಲದ ಪ್ರಯುಕ್ತ ಜಲಧಾರೆಗಳ ವೀಕ್ಷಣೆಗೆ ಧಾರವಾಡದಿಂದ ವಿಶೇಷ (ಪ್ಯಾಕೇಜ್ ಟೂರ್) ಸಾರಿಗೆ ಸೌಲಭ್ಯವನ್ನು ಆಗಸ್ಟ್ 01, 08, 15, 22 ಮತ್ತು 29 ರಂದು ಒದಗಿಸಲಾಗಿದೆ.

 ಬೆಳಿಗ್ಗೆ 7-30 ಗಂಟೆಗೆ ಧಾರವಾಡದಿಂದ ಹೊಸ ಬಸ್ ನಿಲ್ದಾಣದಿಂದ ಹೊರಟು ಜೋಗಫಾಲ್ಸ್ ವೀಕ್ಷಿಸಿ ಧಾರವಾಡಕ್ಕೆ ಸಾಯಂಕಾಲ 7-30 ಗಂಟೆಗೆ ಹಿಂದಿರುಗುವುದು.

ಬೆಳಿಗ್ಗೆ 7-30 ಗಂಟೆಗೆ ಧಾರವಾಡ ಹೊಸ ಬಸ್ ನಿಲ್ದಾಣದಿಂದ ಬಾದಾಮಿ, ಐಹೊಳೆ, ಪಟ್ಟದಕಲ್ಲು ಹಾಗೂ ಬನಶಂಕರಿ ಸ್ಥಳಗಳನ್ನು  ವೀಕ್ಷಿಸಿ,  ಸಾಯಂಕಾಲ 8-30 ಗಂಟೆಗೆ ಧಾರವಾಡಕ್ಕೆ ಹಿಂದಿರುಗಲಾಗುವುದು.

 ಬಸ್ ನಿಲ್ದಾಣದ ಕೌಂಟರುಗಳಲ್ಲಿ ಮತ್ತು www.ksrtc.in ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮುಖಾಂತರ ಆಸನಗಳನ್ನು ಕಾಯ್ದಿರಿಸಬಹುದಾಗಿದೆ. ಈ ಸಾರಿಗೆ ಸೌಲಭ್ಯವನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!