ನಾಳೆ ಧಾರವಾಡದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಹೆಸ್ಕಾಂ ಲಕ್ಕಮನಹಳ್ಳಿ ವ್ಯಾಪ್ತಿಯ 11 ಕೆವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಜನವರಿ 8 ರಂದು 4ನೇ ತ್ರೈಮಾಸಿಕ ತುರ್ತುಪಾಲನಾ ಕಾಮಗಾರಿ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಧಾರವಾಡದ ಟೋಲ್‍ನಾಕಾ, ಮಾಳಮಡ್ಡಿ, ನಗರಕರ ಕಾಲೋನಿ, ಬಾಗಲಕೋಟ ಪೆಟ್ರೋಲ ಪಂಪ್, ಲಕ್ಷ್ಮೀನಗರ, ಗಾಂಧಿ ನಗರ, ಕಲಘಟಗಿ ರಸ್ತೆ, ರಾಜೀವ ನಗರ, ಸರಸ್ವತಿನಗರ, ತೇಜಸ್ವಿನಗರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಅಲ್ಲದೇ ಸಂಗೊಳ್ಳಿ ರಾಯಣ್ಣ ನಗರ, ಗಿರಿನಗರ, ಕೆ.ಎಮ್.ಪಿ, ವೆಂಕಟೇಶ್ವರ, ಸೋಮೇಶ್ವರ, ಗಾರ್ಡನ ಪಾಲಿಮರ, ಜೆ.ಎಸ್.ಎಸ್, ಮಾದರಮಡ್ಡಿ, ನವಲೂರ, ಲಕ್ಕಮ್ಮನಹಳ್ಳಿ ಕೈಗಾರಿಕಾ ಪ್ರದೇಶ, ಜನ್ನತ ನಗರ, ಪಿ.ಬಿ. ರಸ್ತೆ, ಮೂಗಬಸವೇಶ್ವರ, ಹೆಬ್ಬಳ್ಳಿ, ಶಿವಳ್ಳಿ, ಮಾರಡಗಿ, ಸೋಮಾಪುರ, ಗೋವನಕೊಪ್ಪ, ದೊಂಗಡಿಕೊಪ್ಪ ಗ್ರಾಮ ಹಾಗೂ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.

Share this article!

Leave a Reply

Your email address will not be published. Required fields are marked *

error: Content is protected !!