ಧಾರವಾಡದಲ್ಲಿ ಅಂಬಾಸಡರ್ ವಾಹನದ ಬಹಿರಂಗ ಹರಾಜು

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ವಾಹನ ಅಂಬಾಸಡರ್ ಕಾರ್ ಕೆಎ-01-ಜಿ-3589 ಅನ್ನು ಈಗ ಹೇಗಿದೆಯೋ ಹಾಗೆ ಅದೇ ಸ್ಥಿತಿಯಲ್ಲಿ ಹರಾಜು ಮಾಡಲಾಗುವುದು.

ಸ್ಥಳದಲ್ಲಿಯೇ ಷರತ್ತುಗಳ ಪ್ರಕಾರ ಡಿಸೆಂಬರ್ 14 ರಂದು ಬೆಳಿಗ್ಗೆ 11-30 ಗಂಟೆಗೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.

ಹರಾಜು ನಿರ್ವಹಣಾಧಿಕಾರಿಯನ್ನಾಗಿ ಕಚೇರಿ ವ್ಯವಸ್ಥಾಪಕರನ್ನು ನೇಮಿಸಲಾಗಿದೆ. ವಾಹನವನ್ನು ನೋಡಬಯಸುವ ಸಾರ್ವಜನಿಕರು ಕಚೇರಿಯ ಸಮಯದಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5-30 ರೊಳಗೆ ನೋಡಬಹುದು.

ಹೆಚ್ಚಿನ ಮಾಹಿತಿಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರ ಕಚೇರಿ, ಮಿನಿವಿಧಾನಸೌಧ, ಧಾರವಾಡ ಕಚೇರಿ-0836-2447901, ಮೊ:9880882915 ಅನ್ನು ಸಂಪರ್ಕಿಸಬಹುದು ಎಂದು ಕಚೇರಿಯ ಪ್ರಕಟಣೆ ತಿಳಿಸಿದೆ.

Share this article!

Leave a Reply

Your email address will not be published. Required fields are marked *

error: Content is protected !!