ನೃಪತುಂಗ ಬೆಟ್ಟದಲ್ಲಿ ಓಪನ್ ಜಿಮ್ ಉದ್ಘಾಟನೆ

ಮಾಜಿ ಮುಖ್ಯಮಂತ್ರಿ ಹಾಗೂ ಹುಬ್ಬಳ್ಳಿಧಾರವಾಡ ಶಾಸಕರಾದ ಜಗದೀಶ್ ಶೆಟ್ಟರ್ ಅವರು ನೃಪತುಂಗ ಬೆಟ್ಟದಲ್ಲಿ ಓಪನ್ ಜಿಮ್ ಅನ್ನು ನಿನ್ನೆ ಉದ್ಘಾಟಿಸಿದರು.

ನೃಪತುಂಗ ಬೆಟ್ಟದಲ್ಲಿ ರೂ.54 ಲಕ್ಷ ವೆಚ್ಚದಲ್ಲಿ ಪುರುಷರು ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಓಪನ್ ಜಿಮ್ ನಿರ್ಮಾಣ ಮಾಡಲಾಗಿದೆ.

ಉದ್ಘಾಟಿಸಿ ಮಾತನಾಡಿದ ಜಗದೀಶ್ ಶೆಟ್ಟರ್ ಅವರು “ವ್ಯಾಯಾಮ ಮಾಡುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು. ಮಹಿಳೆಯರು ಹಾಗೂ ಪುರುಷರು ಪ್ರತ್ಯೇಕವಾಗಿ ವ್ಯಾಯಾಮ ಮಾಡಲು ಅನುಕೂಲವಾಗಲಿದೆ. ಇದು ಮನಸ್ಸಿಗೆ ಮುದ ನೀಡುವ ತಾಣವಾಗಲಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಹುಡಾ ಅಧ್ಯಕ್ಷ ನಾಗೇಶ ಕಲ್ಬುರ್ಗಿ, ಪಾಲಿಕೆ ಸದಸ್ಯರಾದ ವೀರಣ್ಣ ಸವಡಿ, ಸೀಮಾ ಮೊಗಲಿಶೆಟ್ಟರ್, ಪ್ರಮೋದ ಮುನವಳ್ಳಿ, ಸಿದ್ದು ಮೊಗಲಿಶೆಟ್ಟರ್, ಮೋಹನ ಬಡಿಗೇರ, ವಲಯ ಅರಣ್ಯ ಅಧಿಕಾರಿ ಶ್ರೀಧರ ತೆಗ್ಗಿನಮನಿ, ಡಿ ವೈ ಆರ್ ಏಫ್ ಒ ಪಿ.ಎಂ.ಕರಗುಪ್ಪಿ ಸೇರಿದಂತೆ ಹಲವರು ಇದ್ದರು.

Share this article!

Leave a Reply

Your email address will not be published. Required fields are marked *

error: Content is protected !!