ಸಂಘ ಸಂಸ್ಥೆಗಳಿಗೆ ನವೀಕರಣ ಹಾಗೂ ಫೈಲಿಂಗ್ ಮಾಡಿಕೊಳ್ಳಲು ಡಿಸೆಂಬರ್ 31 ಕೊನೆಯ ದಿನ

ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ 1960 ರಡಿ ನೋಂದಣಿಯಾದ 05 ವರ್ಷ ಮೇಲ್ಪಟ್ಟ ನವೀಕರಣ ಹಾಗೂ ಫೈಲಿಂಗ್ ಮಾಡಿಕೊಳ್ಳದೇ ಇರುವ ಸಂಘ ಸಂಸ್ಥೆಗಳಿಗೆ ಡಿಸೆಂಬರ್ 31, 2022 ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಸಂಘ, ಸಂಸ್ಥೆಗಳ ಜಿಲ್ಲಾ ನೋಂದಣಾಧಿಕಾರಿಗಳು ಹಾಗೂ ಸಹಕಾರ ಸಂಘಗಳ ಉಪನಿಬಂಧಕರು ರಂಜನಾ ಪೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನೋಂದಣಿಯಾಗಿ 5 ವರ್ಷಗಳಿಗೆ ಮೇಲ್ಪಟ್ಟು ಫೈಲಿಂಗ್ ಮಾಡಿಕೊಳ್ಳದೇ ಬಾಕಿ ಇರುವ ಸಂಘ, ಸಂಸ್ಥೆಗಳು ಪ್ರತಿ ವರ್ಷಕ್ಕೆ ರೂ.2,000/- ಹೆಚ್ಚುವರಿ ದಂಡ ಪಾವತಿಸಿ ಫೈಲಿಂಗ್ ಮಾಡಿಕೊಳ್ಳಬೇಕಾಗುತ್ತದೆ.

ಧಾರವಾಡ ಜಿಲ್ಲೆಯಲ್ಲಿ ನೋಂದಾಯಿತ ಎಲ್ಲಾ ಸಂಘ, ಸಂಸ್ಥೆಗಳು ನಿಗದಿತ ಸಮಯದೊಳಗಾಗಿ ಫೈಲಿಂಗ್ ಮಾಡಿಕೊಂಡು ಸಂಘದ ನವೀಕರಣಕ್ಕಾಗಿ ಸರ್ಕಾರವು ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಎಂದು ಅವರು ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!