ನಿನ್ನೆ ಬೆಂಗಳೂರಿನಲ್ಲಿ ಜರುಗಿದ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಧಾರವಾಡ ಜಿಲ್ಲೆಯ ಜಿಲ್ಲಾ ಕಣ್ಗಾವಲು ಘಟಕ ತಂಡಕ್ಕೆ ಕೋವಿಡ್-19 ಉತ್ತಮ ನಿರ್ವಹಣೆಗಾಗಿ ಪ್ರಶಂಸನಾಪತ್ರ ನೀಡಲಾಯಿತು.
ಆರೋಗ್ಯ ಇಲಾಖೆಯ ಆಯುಕ್ತರರಾದ ರಂದೀಪ ಡಿ. ಅವರು ಧಾರವಾಡ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಸುಜಾತಾ ಹಸವಿಮಠ ಅವರಿಗೆ ಸ್ಮರಣಿಕೆ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಕೋವಿಡ್-19 ಮಾದರಿ ಸಂಗ್ರಹಣೆ, ತಪಾಸಣೆ, ಸೋಂಕಿನ ಸಂಪರ್ಕಿತನ ಪತ್ತೆ, ಚಿಕಿತ್ಸೆ ಜಿನೋಮ್ ಸಿಕ್ವೆನ್ಸಿಂಗ್ ಮತ್ತಿತರ ಕಾರ್ಯಗಳನ್ನು ಧಾರವಾಡ ಜಿಲ್ಲಾ ಕಣ್ಗಾವಲು ಘಟಕ ಪ್ರಶಂಸನೀಯ ಕಾರ್ಯ ನಿರ್ವಹಿಸಿತ್ತು.
ಕೋವಿಡ್-19 ಅಂಕಿ ಸಂಖ್ಯೆಗಳ ಸಂಗ್ರಹಣೆ ಕುರಿತು ರಾಜ್ಯ ಮತ್ತು ಜಿಲ್ಲಾಡಳಿತಕ್ಕೆ ವರದಿ ನೀಡುವಲ್ಲಿ ಉತ್ತಮ ಸೇವೆ ಸಲ್ಲಿಸಿ ಮಹತ್ವದ ಪಾತ್ರ ವಹಿಸಿದ ಜಿಲ್ಲಾ ಕಣ್ಗಾವಲು ತಂಡಗಳಿಗೆ ಪ್ರಶಂಸನಾಪತ್ರ ನೀಡಲಾಯಿತು.
ಕೋವಿಡ್-19 ಸಮಯದಲ್ಲಿ ಜಿಲ್ಲಾ ಕಣ್ಗಾವಲು ಘಟಕದಿಂದ ರಾಜ್ಯ ಕಣ್ಗಾವಲು ಘಟಕ ಮತ್ತು ಜಿಲ್ಲಾಡಳಿತದ ನಿರ್ದೇಶನದಂತೆ ಸರ್ಕಾರದ ಮಾರ್ಗಸೂಚಿಯನುಸಾರ ಘಟಕವು ಉತ್ತಮ ಕಾರ್ಯ ನಿರ್ವಹಿಸಿತ್ತು.
ಅವರೊಂದಿಗೆ ತಂಡದ ಸದಸ್ಯರಾದ ಜಿಲ್ಲಾ ಮೈಕ್ರೋಬಯಾಲಜಸ್ಟ್ ಕೀರ್ತಿ ಎನ್.ಕೆ, ಜಿಲ್ಲಾ ಡೆಟಾ ವ್ಯವಸ್ಥಾಪಕಿ ಪೂಜಾ ಹಟ್ಟಿ ಹಾಗೂ ಎನ್‍ಸಿಡಿಸಿ ಜಂಟಿ ನಿರ್ದೇಶಕ ಡಾ. ಸಂಕೇತ ಕುಲಕರ್ಣಿ ಉಪಸ್ಥಿತರಿದ್ದರು.
ಸಮಗ್ರ ರೋಗಗಳ ಕಣ್ಗಾವಲು ವ್ಯವಸ್ಥೆಯ ಯೋಜನಾ ನಿರ್ದೇಶಕ ಡಾ.ರಮೇಶ ಕೌಲಗುಡ್ಡ, ಉಪ ನಿರ್ದೇಶಕಿ ಡಾ.ಪದ್ಮಾ ಆರ್, ರಾಜ್ಯ ಆರೋಗ್ಯ ತರಬೇತಿ ಸಂಸ್ಥೆಯ ನಿರ್ದೇಶಕಿ ಡಾ.ಪರಿಮಳಾ ಮರೂರ ಅವರು ಇದ್ದರು.