ನಾಳೆ ಮುಖ್ಯಮಂತ್ರಿಗಳ ಧಾರವಾಡ ಜಿಲ್ಲಾ ಪ್ರವಾಸ

ಡಿಸೆಂಬರ್ 24 ರಂದು (ನಾಳೆ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಧಾರವಾಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.

ನಾಳೆ ಬೆಳಿಗ್ಗೆ 9-30 ಗಂಟೆಗೆ ಹುಬ್ಬಳ್ಳಿ ಯಿಂದ ಹೊರಟು ಶಿಗ್ಗಾಂವ ಮತಕ್ಷೇತ್ರದಲ್ಲಿ ಆಯೋಜಿಸಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು.

ನಂತರ ಸಂಜೆ 5-30 ಗಂಟೆಗೆ ಸವಣೂರು ತಾಲೂಕು ಹುರಳಿಕುಪ್ಪಿಯಿಂದ ಹೊರಡುವ ಮುಖ್ಯಮಂತ್ರಿಗಳು ಧಾರವಾಡ ಜಿಲ್ಲಾಡಳಿತ ಮತ್ತು ರಂಗಾಯಣ ಕರ್ನಾಟಕ ಕಾಲೇಜು ಮೈದಾನದಲ್ಲಿ ಸಂಜೆ 6-30 ಗಂಟೆಗೆ ಆಯೋಜಿಸಿರುವ ವೀರರಾಣಿ ಕಿತ್ತೂರು ಚನ್ನಮ್ಮ ನಾಟಕ ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ.

ನಂತರ ಅವರು ರಾತ್ರಿ 8 ಗಂಟೆಗೆ ಧಾರವಾಡ ದಿಂದ ಹುಬ್ಬಳ್ಳಿಗೆ ಹೊರಟು ಇಲ್ಲಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!