ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಿಹಳ್ಳಿ ಗ್ರಾಮದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ 100 ವಿದ್ಯಾರ್ಥಿನಿಯರಿಗೆ ಕರಾಟೆ ಮತ್ತು ಸ್ವಯಂ ರಕ್ಷಣಾ ಕೌಶಲ್ಯ ಕಲಿಸಲು ಆಸಕ್ತ ಅಧಿಕೃತ ಪ್ರಮಾಣ ಪತ್ರ ಹೊಂದಿರುವ ಕರಾಟೆ ಸಂಸ್ಥೆಯವರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಾನ್ಯತೆ ಪಡೆದ ಅರ್ಹ ತರಬೇತಿ ಸಂಸ್ಥೆಯವರು ಹಿರೇನೊನ್ನಿಹಳ್ಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ ಇಲ್ಲಿ ಡಿಸೆಂಬರ್ 15 ರೊಳಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ 9886403135, 8310667471 ಸಂಪರ್ಕಿಸಬಹುದೆಂದು ಹಿರೇಹೊನ್ನಿಹಳ್ಳಿಯ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.