ನಾಳೆ ಕುಂದಗೋಳ ಸುತ್ತಮುತ್ತ ವಿದ್ಯುತ್ ನಿಲುಗಡೆ

ಹುಬ್ಬಳ್ಳಿ ಗ್ರಾಮೀಣ ವ್ಯಾಪಿಯಲ್ಲಿ ಬರುವ ಕುಂದಗೋಳ 33/11 ಕೆ.ವಿ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲು ತೀರ್ಮಾನಿಸಲಾಗಿದೆ.

ಡಿಸೆಂಬರ್ 13 ರಂದು (ನಾಳೆ) ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 6 ಗಂಟೆಯವರೆಗೆ 33/11 ಕೆ ವಿ ಮಾರ್ಗಗಳಾದ ಈ ಕೆಳಗಿನ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಪ್ರದೇಶಗಳು: ಕುಂದಗೋಳ ಶಹರ, ಕಡಪಟ್ಟಿ, ಅಲ್ಲಾಪುರ, ಗುಡೇನಕಟ್ಟಿ, ಬೆನಕನಕಟ್ಟಿ, ಹಿರೇನರ್ತಿ, ಬಸಾಪುರ, ಚಿಕ್ಕನರ್ತಿ, ಯರಗುಪ್ಪಿ, ಮಳ್ಳೊಳ್ಳಿ, ಯರಿನಾರಾಯಣಪುರ, ರೊಟ್ಟಿಗವಾಡ, ಕೊಂಕನಕುರಹಟ್ಟಿ, ಚಾಕಲಬ್ಬಿ, ಹಾಗೂ ಕುಂದಗೋಳ ರೈಲ್ವೆ ಗೇಟ್.

ಮಲಪ್ರಭಾ ನೀರಾವರಿ ಪ್ರದೇಶ, ಬೆಳೆಬಾಳ, ದೇವನೂರು, ಹೊಸ ಹಂಚಿನಾಳ, ಹಳೆ ಹಂಚಿನಾಳ, ಕುಬಿಹಾಳ, ಯಲಿವಾಳ, ಇನಾಮಕೊಪ್ಪ, ಬೆಟದೂರ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಸುತ್ತುಮುತ್ತಲಿನ ಗ್ರಾಮಗಳ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಹೆಸ್ಕಾಂ ಪ್ರಕಟಣೆ ತಿಳಿಸಲಾಗಿದೆ.

Share this article!

Leave a Reply

Your email address will not be published. Required fields are marked *

error: Content is protected !!