ಹುಬ್ಬಳ್ಳಿ–ಧಾರವಾಡ ಮಹಾನಗರದ ವಾರ್ಡಗಳಿಗೆ ಒತ್ತಡ ಸಹಿತ 24×7 ನಿರಂತರ ನೀರು ಸರಬರಾಜು ಯೋಜನೆಯನ್ನು ಅನುಷ್ಠಾನ ಮಾಡಲಾಗುತ್ತಿದೆ.
ಕರ್ನಾಟಕ ನಗರ ನೀರು ಸರಬರಾಜು ಆಧುನೀಕರಣ ಯೋಜನೆಯಡಿಯಲ್ಲಿ ವಿಶ್ವಬ್ಯಾಂಕ್ ನೆರವಿನ ಮೂಲಕ ಈ ಯೋಜನೆಯು ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಅನುಷ್ಠಾನಗೊಳ್ಳುತ್ತಲಿದೆ.
ಈ ಯೋಜನೆಯನ್ನು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಾಲೀಕತ್ವದಲ್ಲಿ ಅನುಷ್ಠಾನ ಮತ್ತು ನಿರ್ವಹಣೆ ಮಾಡಲು ಎಲ್ & ಟಿ ನಿರ್ವಾಹಕರಿಗೆ ಗುತ್ತಿಗೆ ನೀಡಲಾಗಿದೆ.
ಕಾರಣಾಂತರಗಳಿಂದ ಅವಳಿ ನಗರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದ್ದು, ಸಾರ್ವಜನಿಕರು ನೀರು ಸರಬರಾಜಿಗೆ ಸಂಬಂಧಪಟ್ಟ ತಮ್ಮ ಕುಂದು-ಕೊರತೆಗಳಿಗಾಗಿ ಗ್ರಾಹಕರ ಸೇವಾ ಕೇಂದ್ರಗಳ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು.
24×7 ಹುಬ್ಬಳ್ಳಿ ಪ್ರಾತ್ಯಕ್ಷಿಕಾ ವಲಯ-0836-2355078, ಹುಬ್ಬಳ್ಳಿ ಪಿ1, ಪಿ1 & ಪಿ1, ಪಿ2-8792443013, ಹುಬ್ಬಳ್ಳಿ ಮಧ್ಯಂತರ ನೀರು ಸರಬರಾಜು-8050501306.
24×7 ಧಾರವಾಡ ಪ್ರಾತ್ಯಕ್ಷಿಕಾ ವಲಯ-0836-2443407, ಧಾರವಾಡ ಪಿ1, ಪಿ1 & ಪಿ1, ಪಿ2-8792443007, ಧಾರವಾಡ ಮಧ್ಯಂತರ ನೀರು ಸರಬರಾಜು-8050500306.
ಅಲ್ಲದೇ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ನೀರು ಸರಬರಾಜು ಸಹಾಯವಾಣಿ-0836-2351955 ಸಂಪರ್ಕಿಸಬಹುದು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
I hope somebody will be there on other side to answer our queries.