ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ

ಧಾರವಾಡ ಜಿಲ್ಲೆಯ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಹುಬ್ಬಳ್ಳಿ – ಧಾರವಾಡ ಸ್ಮಾರ್ಟ್ ಸಿಟಿ ಸಂಸ್ಥೆಯ ಅಧ್ಯಕ್ಷರಾಗಿರುವ  ಡಾ || ರವಿಕುಮಾರ ಸುರಪುರ  ಅವರು ಸ್ಮಾರ್ಟ್ ಸಿಟಿ ಯೋಜನೆಯಡಿ ಹುಬ್ಬಳ್ಳಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.

ಪ್ರಗತಿಯಲ್ಲಿರುವ ಕಾಮಗಾರಿಗಳಾದ  ತೋಳನಕೆರೆಯ ಪುನರ್ ಅಭಿವೃದ್ಧಿ ಕಾಮಗಾರಿಯ ಸ್ಥಳ , ಮಲ್ಟಿಲೆವಲ್ ಕಾರ್ ಪಾರ್ಕಿಂಗ್ ನಿರ್ಮಾಣ ಕಾಮಗಾರಿ , ಕೋರ್ಟ ಸರ್ಕಲ್ ,  ಜನತಾ ಬಜಾರ ಪುನರ್ ನಿರ್ಮಾಣ ಕಾಮಗಾರಿ , ಸಂಗೊಳ್ಳಿ ರಾಯಣ್ಣ ವೃತ್ತ , ಮೀನು ಮಾರುಕಟ್ಟೆಯ ಪುನರ್ ನಿರ್ಮಾಣ ಕಾಮಗಾರಿ , ಗಣೇಶಪೇಟ ,  ಸ್ಮಾರ್ಟ ರಸ್ತೆಗಳ ನಿರ್ಮಾಣ ಕಾಮಗಾರಿ : ಪ್ಯಾಕೇಜ್ -02 ,ಬೆಂಗೇರಿ ಮಾರುಕಟ್ಟೆಯ ಪುನರ್ ನಿರ್ಮಾಣ ಕಾಮಗಾರಿಗಳ ಪರಿವೀಕ್ಷಣೆ ಮಾಡಿದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಅವರಿಂದ ಸ್ಮಾರ್ಟ್ ಸಿಟಿ ಕಾಮಗಾರಿಗಳ ಪರಿಶೀಲನೆ
ಸ್ಮಾರ್ಟ ರಸ್ತೆ ಪ್ಯಾಕೇಜ್-2 ರಲ್ಲಿ ಕೈಗೊಂಡ ಕಾಮಗಾರಿಯ ಒಂದು ನೋಟ

ಘನತ್ಯಾಜ್ಯ ತೋಳನಕೆರೆಗೆ ಸೇರದಂತೆ ಕ್ರಮಕೈಗೊಳ್ಳಬೇಕು. ಕಾಮಗಾರಿಯನ್ನು ಎರಡು ತಿಂಗಳ ಒಳಗೆ ಪೂರ್ಣಗೊಳಿಸಬೇಕು . ಪಕ್ಷಿವಿಹಾರಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ಸಮಾಲೋಚಿಸಿ  ನರ್ಸರಿ ,ಉತ್ತಮ ಗಿಡ- ಮರಗಳನ್ನು ಬೆಳೆಸುವ ಯೋಜನೆಯನ್ನು ಒಂದು ತಿಂಗಳಲ್ಲಿ ಕೈಗೊಳ್ಳಲು ನಿರ್ದೇಶಿಸಿದರು.

ಮಲ್ಟಿಲೇವಲ್ ಕಾರ್ ಪಾರ್ಕಿಂಗ್ ( ಬಹುಮಹಡಿ ವಾಹನ ನಿಲುಗಡೆ ) ಸ್ಥಳದಲ್ಲಿ ಮುಂಜಾಗ್ರತೆ ಕ್ರಮವಾಗಿ ಅಗತ್ಯವಿರುವ ತಡೆಗೋಡೆ ನಿರ್ಮಿಸಿ, ಜನಹಾನಿಯಾಗದಂತೆ ಸುರಕ್ಷತೆ ಕ್ರಮಗಳನ್ನು ಕೈಗೊಂಡು , ಸಾರ್ವಜನಿಕರಿಗೆ ಅನಾನುಕೂಲವಾಗದಂತೆ ಕ್ರಮಗಳನ್ನು ಕೈಗೊಳ್ಳಲು ತಿಳಿಸಿದರು. ಕಾಮಗಾರಿಗಳನ್ನು  ಒಂದು ತಿಂಗಳ  ನಂತರ  ಅವಲೋಕಿಸಿ ಪ್ರಗತಿ ಕಂಡು ಬರದಿದ್ದರೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಸೂಚಿಸಿದರು.

 ಸ್ಮಾರ್ಟ ರಸ್ತೆಗಳ ಪ್ಯಾಕೇಜ್ -02 ಕಾಮಗಾರಿಗಳು  ಮಳೆ ನೀರು ಚರಂಡಿಗೆ ಅಳವಡಿಸಿರುವ ಚೇಂಬರ್ ಕವರ್‌ಗಳನ್ನು ವಿನ್ಯಾಸದಂತೆ 50 ಮೀಟರ್‌ ನಿಯಮಿತ ಅಂತರದಲ್ಲಿ ಅಳವಡಿಸಬೇಕು.  ಕಾಮಗಾರಿಯ ಗುಣಮಟ್ಟವನ್ನು ಪರೀಕ್ಷಿಸುತ್ತಿರಬೇಕು ಎಂದು ಅವರು ಹೇಳಿದರು.

ಜನತಾ ಬಜಾರ , ಮೀನು ಮಾರುಕಟ್ಟೆ ಮತ್ತು ಬೆಂಗೇರಿ ಮಾರುಕಟ್ಟೆ ಸೇರಿದಂತೆ  ಎಲ್ಲಾ ಕಾಮಗಾರಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು.  ತ್ವರಿತವಾಗಿ  ಜನತಾ ಬಜಾರ ಕಾಮಗಾರಿಯನ್ನು 8 ತಿಂಗಳ ಅವಧಿಯಲ್ಲಿ ಹಾಗೂ ಉಳಿದ ಕಾಮಗಾರಿಯನ್ನು ಮೂರು ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶಿಸಿದರು. 

ಹುಬ್ಬಳ್ಳಿಧಾರವಾಡ ಸ್ಮಾರ್ಟ ಸಿಟಿ ಲಿ ವ್ಯವಸ್ಥಾಪಕ ನಿರ್ದೇಶಕ ಶಕೀಲ್ ಅಹ್ಮದ್, ಮುಖ್ಯ ಅಭಿಯಂತರರು , ಕಾರ್ಯಪಾಲಕ ಅಭಿಯಂತರರಗಳು , ಸಹಾಯಕ ಕಾರ್ಯಪಾಲಕ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳು ಹಾಜರಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!