ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ

2021-22 ನೇ ಸಾಲಿನ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಹಸಿಮೆಣಸಿಕಾಯಿ ಬೆಳೆ ಆಯ್ಕೆಯಾಗಿದೆ. ರೈತರು ಈ ವಿಮೆಯ ಲಾಭ ಪಡೆಯಲು ಅರ್ಜಿ ಸಲ್ಲಿಸಿ ಪ್ರತಿ ಎಕರೆಗೆ 1420 ರೂ. ವಿಮಾ ಮೊತ್ತ ಪಾವತಿಸಬೇಕು.

ಒಂದು ವೇಳೆ ಹವಾಮಾನ ವೈಪರೀತ್ಯ ಸಂಭವಿಸಿದ್ದಲ್ಲಿ ಪ್ರತಿ ಎಕರೆಗೆ ರೈತರು ಗರಿಷ್ಠ 28,400 ರೂ.ವರೆಗೂ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಧಾರವಾಡ ತಾಲೂಕಿನ ಯರಿಕೂಪ್ಪ, ಚಿಕ್ಕಮಲ್ಲಿಗವಾಡ, ಬೇಲೂರು, ಮಧನಬಾವಿ, ಹಂಗರಕಿ, ತೇಗೂರ, ನರೇಂದ್ರ, ಲೋಕೂರ, ಯಾದವಾಡ, ಕೋಟೂರ, ಕುರಬಗಟ್ಟಿ, ಗರಗ, ತಡಕೋಡ, ಕೊಟಬಾಗಿ, ಅಮ್ಮಿನಭಾವಿ, ಮರೆವಾಡ, ಕರಡಿಗುಡ್ಡ, ಪುಡಕಲಟ್ಟಿ, ಮಾರಡಗಿ, ಶಿವಳ್ಳಿ, ಉಪ್ಪಿನಬಟಗೇರಿ, ಹರೋಬೆಳವಡಿ, ಕನಕೂರ, ಹೆಬ್ಬಳ್ಳಿ ಗ್ರಾಮಗಳ ರೈತರು ವಿಮೆ ಕಂತು ಪಾವತಿಸಲು ಹತ್ತಿರದ ರಾಷ್ತ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ ಮತ್ತು ಸಹಕಾರಿ ಸಂಘಗಳನ್ನು ಸಂರ್ಪಕಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಗೋಗಪ್ಪ (0836-2744376), ಅಮ್ಮಿನಭಾನಿ ಹೋಬಳಿಯ  ಅಧಿಕಾರಿ ಮಹೇಶ ಪಟ್ಟಣಶೆಟ್ಟಿ (ಮೊ.9916114535), ಧಾರವಾಡ ಹೋಬಳಿಯ  ಅಧಿಕಾರಿ ಯಲ್ಲಮ್ಮ ಐರಣಗಿ (ಮೊ.9591164754), ಗರಗ ಹೋಬಳಿಯ  ಅಧಿಕಾರಿ ದೀಪ್ತಿ ವಾಲಿ (ಮೊ.8296482663) ಸಂಪರ್ಕಿಸಬಹುದು.

Share this article!

Leave a Reply

Your email address will not be published. Required fields are marked *

error: Content is protected !!