ಬಳ್ಳಾರಿ ಗ್ರಾಮಾಂತರದಲ್ಲಿ ನಾಳೆ ವಿದ್ಯುತ್ ವ್ಯತ್ಯಯ

ಬಳ್ಳಾರಿ ಗ್ರಾಮೀಣ ಜೆಸ್ಕಾಂ ವ್ಯಾಪ್ತಿಯಲ್ಲಿ 33/11ಕೆ.ವಿ ಯರ್ರಗುಡಿ ಮತ್ತು 110/11ಕೆ.ವಿ ಮೋಕಾ ಉಪಕೇಂದ್ರದ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಮತ್ತು ದುರಸ್ತಿ ಕಾರ್ಯವನ್ನು ತುರ್ತಾಗಿ ಕೈಗೊಳ್ಳಲಾಗಿದೆ.

ಸದರಿ ಉಪಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ 11ಕೆ.ವಿ ಮಾರ್ಗಗಳಲ್ಲಿ ಡಿ.23ರಂದು ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಬಳ್ಳಾರಿ ಗ್ರಾಮೀಣ ಜೆಸ್ಕಾಂನ ಸಹಾಯಕ ಇಂಜಿನಿಯರ್ ಸಂತೋಷಿ ಬಾಯಿ ಅವರು ತಿಳಿಸಿದ್ದಾರೆ.

ವಿದ್ಯುತ್ ವ್ಯತ್ಯಯವಾಗಲಿರುವ ಪ್ರದೇಶಗಳಿವು: ಎಫ್-1 ಫೀಡರ್ ಬಿ.ಡಿ.ಹಳ್ಳಿ ಐಪಿ ಮಾರ್ಗದ ಮೋಕಾ ಬಿ.ಡಿ.ಹಳ್ಳಿ ಗ್ರಾಮಗಳು. ಎಫ್-2 ಜಿ.ಎನ್ ಹಳ್ಳಿ ಐಪಿ ಮಾರ್ಗದ ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಗುಡದೂರು ಗ್ರಾಮಗಳು.

ಎಫ್-4 ಫೀಡರ್ ಮೋಕಾ, ಶಿವಪುರ ಐಪಿ ಮಾರ್ಗ, ಎಫ್-5 ಫೀಡರ್ ವಾಟರ್ ವಕ್ರ್ಸ್ ಮಾರ್ಗ, ಎಫ್-12 ಫೀಡರ್ ಬಸರಕೋಡು ಎನ್.ಜೆ.ವೈ ಮಾರ್ಗದ ಶಿವಪುರ, ಕಪ್ಪಗಲ್ಲು, ಸಿರಿವಾರ, ಸಂಗನಕಲ್ಲು, ಚಾಗನೂರು, ವಾಟರ್ ವಕ್ರ್ಸ್.

ಗೋಟೂರು, ಕೆ.ಕೆಹಾಳ್, ಮಸೀದಿಪುರ, ವಣೆನೂರು, ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಗ್ರಾಮಗಳು.

ಎಫ್-13 ಫೀಡರ್ ಬಸರಕೋಡು ಐಪಿ ಮಾರ್ಗದ ಕರ್ಚೇಡು, ಬಸರಕೋಡು, ಹೀರೆಹಡ್ಲಿಗಿ ಗ್ರಾಮ. ಎಫ್-14 ಫೀಡರ್‍ನ ಕಪ್ಪಗಲ್ಲು ಮತ್ತು ಸೋಲಾರ್ ಮಾರ್ಗದ ಶಿವಪುರ, ಅಶೋಕ ನಗರ ಕ್ಯಾಂಪ್, ಕಪ್ಪಗಲ್ಲು, ಸಿರುವಾರ, ಚಾಗನೂರು ಗ್ರಾಮಗಳು.

ಎಫ್-15 ಫೀಡರ್ ಮೋಕಾ ಮತ್ತು ಸೋಲಾರ್ ಮಾರ್ಗದ ಮೋಕಾ ಮತ್ತು ಬಿ.ಡಿ.ಹಳ್ಳಿ ಗ್ರಾಮ. ಎಫ್-1 ಫೀಡರ್‍ನ ಡಿ.ಎನ್.ಹಳ್ಳಿ ಐಪಿ ಮಾರ್ಗದ ಡಿಎನ್.ಹಳ್ಳಿ, ಜಿ.ಎನ್.ಹಳ್ಳಿ, ತಂಬ್ರಳ್ಳಿ, ಜಾಲಿಚಿಂತೆ ಗ್ರಾಮಗಳು.

ಎಫ್-2 ಫೀಡರ್‍ನ ಜಿ.ಎನ್ ಹಳ್ಳಿ ಐಪಿ ಮಾರ್ಗದ ಜಿ.ಎನ್.ಹಳ್ಳಿ, ತಂಬ್ರಳ್ಳಿ ಗ್ರಾಮಗಳು. ಎಫ್-3 ಫೀಡರ್‍ನ ಹಳೆ ಯರ್ರಗುಡಿ ಐಪಿ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು ಗ್ರಾಮಗಳು.

ಎಫ್-5 ಫೀಡರ್‍ನ ಸಿಂದುವಾಳ ಮತ್ತು ಸೋಲಾರ್ ಮಾರ್ಗದ ಹಳೆ ಯರ್ರಗುಡಿ, ಹೊಸ ಯರ್ರಗುಡಿ, ಸಿಂಧುವಾಳ, ಬೆಣಕಲ್ಲು ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು.

ಎಫ್-6 ಫೀಡರ್‍ನ ಜಾಲಿಹಾಳ್ ಐಪಿ ಮಾರ್ಗದ ಎಂ.ಗೋನಾಳ್, ಜಾಲಿಹಾಳ್, ಬೊಮ್ಮನಹಾಳ್ ಗ್ರಾಮಗಳು. 33ಕೆ.ವಿ ಮಾರ್ಗದ 33ಕೆ.ವಿ ಎನ್.ಡಿ.ಪಿ.ಎಲ್ ಪ್ರದೇಶಗಳು. ವಿದ್ಯುತ್ ಗ್ರಾಹಕರು ಮತ್ತು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!