ಬಳ್ಳಾರಿ: ಕುರೆಕುಪ್ಪ ಪುರಸಭೆ ವ್ಯಾಪ್ತಿಯಲ್ಲಿ ಅಮೃತ ನಗರೋತ್ಥಾನದ ಹಂತ-4ರಲ್ಲಿ ಶೇ.24.10ರ ಯೋಜನೆಯಡಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ನಿವೇಶನ ರಹಿತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಲ್ಲಿಸಲು ಜನವರಿ 5ರಂದು ಕೊನೆಯ ದಿನವಾಗಿರುತ್ತದೆ.
ದಾಖಲೆಗಳು: ಆಧಾರಕಾರ್ಡ್, ವೋಟರ್‍ಐಡಿ, ರೇಷನ್‍ಕಾರ್ಡ್. ವಿಕಲಚೇತನರಾಗಿದ್ದರೆ, ವಿಕಲಚೇತನ ಪ್ರಮಾಣ ಪತ್ರ. ಜಾತಿ ಮತ್ತು ಆದಾಯ ಪ್ರಮಾಣ ಪತ್ರ. ಪಾಸ್‍ಪೋರ್ಟ್ ಅಳತೆಯ 4-ಭಾವಚಿತ್ರ (ಕಲರ್).
ಅರ್ಜಿದಾರರು ತಮ್ಮ ಅಥವಾ ತಮ್ಮ ಕುಟುಂಬ ಸದಸ್ಯರ ಹೆಸರಿನಲ್ಲಿ ಯಾವುದೇ ನಿವೇಶನ ಅಥವಾ ಮನೆ ಇಲ್ಲದಿರುವ ಬಗ್ಗೆ ರೂ.100 ಛಾಪಾ ಕಾಗದ(ಇ-ಸ್ಟಾಂಪ್) ದಲ್ಲಿ ನಮೂದಿಸಿದ ಕೋರ್ಟ್ ಅಫಿಡೆವಿಟ್ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಕುರೆಕುಪ್ಪ ಪುರಸಭೆ ಕಚೇರಿ ಅಥವಾ ದೂ.08393-295601 ಗೆ ಸಂಪರ್ಕಿಸಬಹುದು ಎಂದು ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.