ಕ್ರಿಸ್ ಮಸ್ ಹಾಗೂ ಹೊಸ ವರ್ಷ ಆಚರಣೆಗೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಕೋವಿಡ್-19 ರೂಪಾಂತರಿ ಓಮಿಕ್ರಾನ್ ವೈರಾಣು ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. 

ಸೋಂಕು ಹರಡುವಿಕೆಯನ್ನು ನಿಯಂತ್ರಿಸುವ ಸಂಬಂಧದಲ್ಲಿ ಇನ್ನೂ ಹೆಚ್ಚಿನ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಮತ್ತು ಅವಶ್ಯಕತೆ ಕಂಡುಬಂದಿದೆ.

ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಕ್ರಿಸ್‌ಮಸ್‌ ಹಬ್ಬ ಹಾಗೂ ಹೊಸವರ್ಷವನ್ನು ಸರಳವಾಗಿ ಆಚರಿಸುವ ಅವಶ್ಯಕತೆ ಇದೆ. 

ಈ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಾಮೂಹಿಕ ಕೂಟ (Party)ಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಹೆಚ್ಚು ಜನಸಂಖ್ಯೆಯುಳ್ಳ ವಸತಿ ಸಮುಚ್ಚಯಗಳಲ್ಲಿ ಮತ್ತು ಪಬ್/ಬಾರ್/ರೆಸ್ಟೋರೆಂಟ್ ಹಾಗೂ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವಂತಹ ಸ್ಥಳಗಳಲ್ಲಿ ಆಯೋಜಿಸುವುದನ್ನು ಕರ್ನಾಟಕ ಸರ್ಕಾರ ನಿಷೇಧಿಸಲಾಗಿದೆ.

ಕ್ರಿಸ್ ಮಸ್ ಆಚರಣೆಗೆ ಮಾರ್ಗಸೂಚಿಗಳು

ಚರ್ಚ್ ಆವರಣದಲ್ಲಿ ಸಾಂಪ್ರದಾಯಿಕ ರೀತಿಯಲ್ಲಿ ಸಾರ್ಥನಗಳು / ಸಾಮೂಹಿಕ ಇತ್ಯಾದಿಗಳನ್ನು ಕೋವಿಡ್ ಸಮುಚಿತ ವರ್ತನೆ ಅನುಸರಿಸುವುದು.

ಆಚರಣೆಗೆ ಅಥವಾ ಪ್ರಾರ್ಥನೆಗಳನ್ನು ನಡೆಸಲು ಯಾವುದೇ ಸಾರ್ವಜನಿಕ ಸ್ಥಳಗಳು/ ರಸ್ತೆಗಳು/ ಉದ್ಯಾನವನ ಇತ್ಯಾದಿಗಳನ್ನು ಬಳಸುವಂತಿಲ್ಲ.

ಹೊಸ ವರ್ಷಾಚರಣೆ ಮಾರ್ಗಸೂಚಿಗಳು (ದಿನಾಂಕ 30-12-2021 ರಿಂದ 2-1-2022 ರ ವರೆಗೆ ಜಾರಿ)

ಕ್ಲಬ್‌ಗಳು / ಪಬ್‌ಗಳು / ರೆಸ್ಟೋರೆಂಟ್‌ಗಳು / ಹೋಟೆಲ್‌ಗಳು / ಉದ್ಯಾನವನಗಳು ಅಥವಾ ಖಾಸಗಿ ಸ್ಥಳಗಳಲ್ಲಿ ಡಿಜೆ/ ಆರ್ಕೆಸ್ಟ್ರಾ/ ಸಮೂಹ ನೃತ್ಯ (Dancing) ಮುಂತಾದ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ನಡೆಸಲು ಅವಕಾಶವಿರುವುದಿಲ್ಲ.

ಹೊಸ ವರ್ಷವನ್ನು ಆಚರಿಸಲು ಸಾರ್ವಜನಿಕ ಸ್ಥಳಗಳು ಸೇರಿದಂತೆ ರಸ್ತೆಗಳು, ಉದ್ಯಾನವನಗಳು, ಆಟದ ಮೈದಾನಗಳು ಇತ್ಯಾದಿಗಳನ್ನು ಬಳಸಬಾರದು.

ರೆಸ್ಟೋರೆಂಟ್‌ಗಳು / ಹೋಟೆಲ್‌ಗಳು / ಕ್ಲಬ್‌ಗಳು / ಪಬ್‌ಗಳು ಎಂದಿನಂತೆ ಕೋವಿಡ್ ಸಮುಚಿತ ವರ್ತನೆಯೊಂದಿಗೆ ಸಿಬ್ಬಂದಿಗಳು RTPCR-Negative ಮತ್ತು 2 ಡೋಸ್ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಪಡೆಯುವ ಮೂಲಕ ಕಾರ್ಯನಿರ್ವಹಿಸಬಹುದು.

ರೆಸ್ಟೋರೆಂಟ್‌ಗಳು / ಹೋಟೆಲ್‌ಗಳು / ಕ್ಲಬ್‌ಗಳು / ಪಬ್‌ಗಳಿಗೆ ಪ್ರವೇಶ ನೀಡುವ ಸಾರ್ವಜನಿಕರು ಕಡ್ಡಾಯವಾಗಿ 2 ಡೋಸ್ ಕೋವಿಡ್ ಲಸಿಕೆ ಯನ್ನು ಪಡೆದಿರುವುದನ್ನು ಪ್ರದರ್ಶಿಸಿದ ನಂತರವೇ ಪ್ರವೇಶಕ್ಕೆ ಅವಕಾಶ ಮಾಡಿಕೊಡತಕ್ಕದ್ದು.

ಅಪಾರ್ಟ್ ಮೆಂಟ್ ಅಸೋಸಿಯೇಷನ್‌ಗೆ ಸಂಬಂಧಪಟ್ಟಂತೆ ಸಾಮಾಜಿಕ ಅಂತರ ಹಾಗೂ ಕೋವಿಡ್ ಸಮುಚಿತ ವರ್ತನೆಯೊಂದಿಗೆ ತಮ್ಮ ಆವರಣದಲ್ಲಿ ಕಾರ್ಯಕ್ರಮ ನಡೆಸಲು ಅನುಮತಿಸಲಾಗಿದೆ.

ಗುಂಪು ನೃತ್ಯಕ್ಕಾಗಿ ಡಿಜೆ / ಡ್ಯಾನ್ಸ್ ಫ್ಲೋರ್‌ನಂತಹ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಚರಿಸುವಂತಿಲ್ಲ. ಮೇಲಿನ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವುದನ್ನು ಖಚಿತಪಡಿಸಿಕೊಳ್ಳಲು ಸಂಘಟಕರು ಜವಾಬ್ದಾರರಾಗಿರುತ್ತಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಹೋಟೆಲ್‌ಗಳು/ಮಾಲ್‌ಗಳು/ಪಬ್/ರೆಸ್ಟೋರೆಂಟ್‌ಗಳು ಹಾಗೂ ಅಂತಹ ಪ್ರದೇಶಗಳಲ್ಲಿ ಥರ್ಮಲ್ ಸ್ಕ್ರೀನಿಂಗ್ ಹಾಗೂ ಸ್ಯಾನಿಟೈಸರ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಇರಿಸತಕ್ಕದ್ದು.

Share this article!

Leave a Reply

Your email address will not be published. Required fields are marked *

error: Content is protected !!