ಹುಬ್ಬಳ್ಳಿ ಚಿಕ್ಕಜಾಜೂರು ರೈಲ್ವೆ ಜೋಡಿ ಮಾರ್ಗ ಡಿಸೆಂಬರ್ 2022ರೊಳಗಾಗಿ ಮುಕ್ತಾಯ

ನೈಋತ್ಯ ರೇಲ್ವೆ ವ್ಯಾಪ್ತಿಯಲ್ಲಿ ಬರುವ ಹುಬ್ಬಳ್ಳಿ ಚಿಕ್ಕಜಾಜೂರು ರೈಲ್ವೆ ಜೋಡಿ ಮಾರ್ಗ ಬರುವ ಡಿಸೆಂಬರ್ 2022 ರೊಳಗಾಗಿ ಮುಕ್ತಾಯವಾಗಲಿದೆ ಎಂದು ಕೇಂದ್ರ ಮಂತ್ರಿ ಪ್ರಹ್ಲಾದ್ ಜೋಷಿ ಅವರು ತಿಳಿಸಿದ್ದಾರೆ.

ತುಮಕೂರುಚಿತ್ರದುರ್ಗದಾವಣಗೆರೆ ಹೊಸ ರೈಲು ಮಾರ್ಗಕ್ಕೆ ಬೇಕಾಗಿರುವ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡು ಇರುವ ಎಲ್ಲ ಅಡೆ ತಡೆಗಳನ್ನು ನಿವಾರಿಸಿ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಇತ್ಯರ್ಥಗೊಳಿಸಲು ಅವರು ಸೂಚಿಸಿದರು.

ಹುಬ್ಬಳ್ಳಿಬೆಂಗಳೂರು ನಡುವಿನ ವಿದ್ಯುದೀಕರಣ ಕಾಮಗಾರಿ ಮುಂದಿನ 2023ರ ಜೂನ್ ಒಳಗೆ ಮುಕ್ತಾಯಗೊಳ್ಳಲಿದೆ. ಈ ಎಲೆಕ್ಟ್ರಿಕ್ ರೈಲುಗಳ ಸಂಚಾರ ಪ್ರಾರಂಭಗೊಂಡರೆ ರೈಲ್ವೆ ಇಲಾಖೆಗೆ ಸಾಕಷ್ಟು ಹಣ ಉಳಿತಾಯವಾಗಲಿದೆಯಲ್ಲದೇ ಪರಿಸರಕ್ಕೆ ಹಾನಿಯಾಗುವುದೂ ತಪ್ಪುತ್ತದೆ. 

ರೈಲ್ವೇ ಸಂಚಾರಕ್ಕೆ ಪ್ರತಿವರ್ಷ ಕೋಟ್ಯಂತರ ರೂ. ಡೀಸೆಲ್ ವೆಚ್ಚವಾಗುತ್ತಿದೆ. ಎಲೆಕ್ಟ್ರಿಕಲ್ ರೈಲು ಸಂಚಾರದಿಂದ ಡೀಸೆಲ್ ವೆಚ್ಚ ಕಡಿತಗೊಳ್ಳಲಿದೆ.

ಈಗಿರುವ ಡೀಸೆಲ್ ರೈಲುಗಳು ಕಾರ್ಬನ್ ಡೈ ಆಕ್ಸೈಡ್ ಹೊರಸೂಸುತ್ತಿದ್ದು, ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು ಎಲೆಕ್ಟ್ರಿಕ್ ರೈಲುಗಳು ಪರಿಸರ ಸ್ನೇಹಯಾಗಿವೆ.

ಹಳಿಯಾಳ – ಧಾರವಾಡ ರಸ್ತೆಯ ತಪೋವನ ಹತ್ತಿರದ ರೈಲ್ವೆ ಗೇಟ್ ನಂ- 300 ಹಾಗೂ ಕರ್ನಾಟಕದ ವಿಶ್ವ ವಿದ್ಯಾಲಯದ ರೈಲ್ವೆ ಗೇಟ್ ನಂ- 299 ಈ ಎರಡು ಗೇಟಗಳಲ್ಲಿ ರಸ್ತೆ ಮೇಲ್ಸೆತುವೆ ನಿರ್ಮಾಣಕ್ಕೆ ರೈಲ್ವೆ ಇಲಾಖೆಗೆ ಸೂಚಿಸಿದ್ದಾರೆ.

ಹುಬ್ಬಳ್ಳಿ ಬೈಪಾಸ್ ರೈಲ್ವೆ ಲೈನಿನ ಹತ್ತಿರ ಬರುವ ಗೋಪನಕೊಪ್ಪ, ಬೆಂಗೇರಿ ಹತ್ತಿರ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನು ಮುಗಿಸಲು ಕೇಂದ್ರ ಮಂತ್ರಿ ಅವರು ಸೂಚಿಸಿದರು.

ಧಾರವಾಡ-ದಾಸನಕೊಪ್ಪ ವರ್ತುಲ ಅಗಲೀಕರಣಕ್ಕೆ ಬೇಕಾದ ಅಗತ್ಯವಿರುವ ಜಮೀನನ್ನು ಕೂಡಲೇ ಪಾಲಿಕೆಗೆ ಹಸ್ತಾಂತರಿಸುವ ಬಗ್ಗೆ ರೈಲ್ವೆ ಮಹಾಪ್ರಬಂಧಕರು ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸಭೆಯಲ್ಲಿ ಮಹಾಪ್ರಬಂಧಕ ಶ್ರೀ ಸಂಜೀವ್ ಕಿಶೋರ್, ಹುಬ್ಬಳ್ಳಿ ವಿಭಾಗೀಯ ರೈಲ್ವೆ ಪ್ರಬಂಧಕ ಅರವಿಂದ ಮಳಖೇಡೆ, ಮಹಾನಗರ ಪಾಲಿಕೆ ಆಯುಕ್ತ ಶ್ರೀ ಸುರೇಶ ಇಟ್ನಾಳ ಹಾಗೂ ಹಲವಾರು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

Share this article!

One thought on “ಹುಬ್ಬಳ್ಳಿ ಚಿಕ್ಕಜಾಜೂರು ರೈಲ್ವೆ ಜೋಡಿ ಮಾರ್ಗ ಡಿಸೆಂಬರ್ 2022ರೊಳಗಾಗಿ ಮುಕ್ತಾಯ

  1. Do early Mangalore sapearte railway division office or add SWR and kabakaputtur to kushalnagar. shimoga thirthhalli sringeri skbordor karkala udupi and chikkmangaluru to sringeri laying railway route very important for Karnataka

Leave a Reply

Your email address will not be published. Required fields are marked *

error: Content is protected !!