ಕಾರ್ಯನಿರ್ವಾಹಕ ಅಭಿಯಂತರರು (ವಿ), ಕಾ ಮತ್ತು ಮಾ ನಗರ ವಿಭಾಗ ಹೆಸ್ಕಾಂ ವಿದ್ಯಾಗಿರಿರವರು ಮೊದಲನೇ ಶನಿವಾರ ಅಂದರೆ ಡಿಸೆಂಬರ್ 03 ರಂದು ಮಧ್ಯಾಹ್ನ 3 ಗಂಟೆಗೆ ಏರ್ಪಡಿಸಲಾಗಿದೆ.
ಶಹರ ಉಪ-ವಿಭಾಗ-1 ಹೆಸ್ಕಾಂ., ವಿದ್ಯಾಗಿರಿ ಧಾರವಾಡ ಕಛೇರಿಯಲ್ಲಿ ಗ್ರಾಹಕರೊಂದಿಗೆ ಸಂವಾದ ಸಭೆ ಮತ್ತು ವಿದ್ಯುತ್ ಸುರಕ್ಷತಾ ದಿನದ ವಿಷಯದ ಕುರಿತು ಸಭೆ ನಡೆಸಲಿದ್ದಾರೆ.
ಗ್ರಾಹಕರು ತಮ್ಮ ಅಹವಾಲುಗಳನ್ನು ಮುಂಚಿತವಾಗಿ ನೋಂದಾಯಿಸಿ ಮತ್ತು ವಿದ್ಯುತ್ ಸಂಬಂದಿತ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಬಹುದಾಗಿದೆ ಎಂದು ಹೆಸ್ಕಾಂ ಶಹರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.