ಆರೋಗ್ಯ ಇಲಾಖೆಯಿಂದ ಕೋವಿಡ್ ಸೋಂಕಿತರಿಗೆ ನೆರವಾಗಲು ಇ-ಸಂಜೀವಿನಿ ಟೆಲಿಮೆಡಿಸಿನ್ ಸೇವೆ ಪ್ರಾರಂಭಿಸಲಾಗಿದೆ. ತ್ವರಿತ ಮಾರ್ಗದರ್ಶಿಯ ಎಲ್ಲಾ ಸೇವೆಗಳ ಪಟ್ಟಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿದೆ.
ಕೋವಿಡ್-19 ಸೋಂಕಿತರು ಮನೆಯಲ್ಲಿ ಪ್ರತ್ಯೇಕವಾಗಿ ಕ್ವಾರೆಂಟೈನ್‍ನಲ್ಲಿ ಇರುವವರು ಇ-ಸಂಜೀವಿನಿ ಹೊರರೋಗಿ ಚಿಕಿತ್ಸೆ (OPD) ಮೂಲಕ ಟೆಲಿಕನ್ಸಲ್ಟೇಷನ್ ಸೇವೆಗಳನ್ನು ಪಡೆದುಕೊಳ್ಳಬಹುದು.
ಟೆಲಿಮೆಡಿಸಿನ್ ಕಾರ್ಯನಿರ್ವಹಿಸುವ ವಿಧಾನ
ಗೂಗಲ್ ಪ್ಲೇ ಅಥವಾ ಆಪ್‍ಸ್ಟೋರ್‍ನಿಂದ ಇ-ಸಂಜೀವಿನಿ ಓಪಿಡಿ ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬೇಕು. ನಂತರ ನೋಂದಣಿ ಮತ್ತು ಟೋಕನ್ ಜನರೇಷನ್ ಮಾಡಬೇಕು. ಓಟಿಪಿ ಬಳಸಿಕೊಂಡು ನಿಮ್ಮ (ಸೋಂಕಿತರು) ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಬೇಕು.
ಇ-ಸಂಜೀವಿನಿಯಲ್ಲಿ ರೋಗಿಯ ನೋಂದಣಿಯ ಫಾರ್ಮ್ ಭರ್ತಿ ಮಾಡಿ, ಆರೋಗ್ಯ ಸಂಬಂಧಿತ ದಾಖಲೆಗಳಿದ್ದರೆ ಅಪ್‍ಲೋಡ್ ಮಾಡಬೇಕು. ನಂತರ ಬರುವ ಎಸ್‍ಎಂಎಸ್‍ನಲ್ಲಿ ರೋಗಿಯ ಐಡಿ ಮತ್ತು ಟೋಕನ್ ಸ್ವೀಕರಿಸಬೇಕು.
ಲಾಗಿನ್ ಮಾಡುವುದು: ರೋಗಿಯ ಐಡಿಯೊಂದಿಗೆ ಲಾಗಿನ್ ಆಗಬೇಕು. ವರ್ಚುವಲ್ ಕರೆ ಬಟನ್ ಒತ್ತಿದಾಗ, ಸಕ್ರಿಯಗೊಳಿಸಲಾಗುತ್ತದೆ. ಆಗ ರೋಗಿಯು ವಿಡಿಯೋ ಕರೆಯನ್ನು ಪ್ರಾರಂಭಿಸಿಬಹುದು.
ವಿಡಿಯೋ ಕರೆ: ವಿಡಿಯೋ ಕರೆ ಮಾಡಿದಾಗ ರೋಗಿಯು ವೈದ್ಯರನ್ನು ಸಂಪರ್ಕಿಸಿ, ಅವರಿಂದ ತಕ್ಷಣ ಇ-ಪ್ರಿಸ್ಕ್ರಿಪ್ಷನ್, ಆನ್‍ಲೈನ್ ಓಪಿಡಿ, ರಿಯಲ್ ಟೈಮ್ ಟೆಲಿಮೆಡಿಸನ್ ಹಾಗೂ ರಾಜ್ಯ ಸೇವೆಗಳ ವೈದ್ಯರಿಂದ ಅಗತ್ಯ ಮಾಹಿತಿ, ಸಲಹೆ ಪಡೆಯಬಹುದು.
ವಿಡಿಯೋ ಸಮಾಲೋಚನೆಗಳು, ಚಾಟ್‍ಮಾಡಿ ಆರೋಗ್ಯ ಕುರಿತ ಆಪ್ತಸಮಾಲೋಚನೆಯಲ್ಲಿ ಭಾಗಿಯಾಗಬಹುದು.
ವಿಡಿಯೋ ಕರೆ ಮಾಡಿದಾಗ ರೋಗಿಯು ರಾಜ್ಯ ಸೇವೆಗಳ ವೈದ್ಯರಲ್ಲಿ ತಮ್ಮ ಖಾಯಿಲೆಯ ಬಗ್ಗೆ ಚರ್ಚಿಸಿ ಸೂಕ್ತ ಚಿಕಿತ್ಸೆ, ಮಾರ್ಗದರ್ಶನವನ್ನು ಆಪ್ತ ಸಮಾಲೋಚನೆ ಮೂಲಕ ಪಡೆದು, ಇ-ಪ್ರಿಸ್ಕ್ರಿಪ್ಷನ್ (ePrescription) ಡೌನ್‍ಲೋಡ್ ಮಾಡಿಕೊಂಡು ಔಷಧಿಗಳನ್ನು ತೆಗೆದುಕೊಳ್ಳಬಹುದು.
ಇ-ಸಂಜೀವಿನಿಗಾಗಿ ಸಹಾಯವಾಣಿ ಸಂಖ್ಯೆ 011-23978046, ಟೋಲ್ ಫ್ರೀ : 1075, ಸಹಾಯವಾಣಿ ಇ-ಮೇಲ್: ncov2019@gov.in, ವೆಬ್‍ಸೈಟ್: https://esanjeevaniopd.in/ ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.