ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ನೂತನ ಜಿಲ್ಲಾ ನೂತನ ಕಾರ್ಯದರ್ಶಿ ಯಾಗಿ ಧಾರವಾಡ ಸರಕಾರಿ ಐಟಿಐ ಕಾಲೇಜಿನ ಕಿರಿಯ ತರಬೇತಿ ಅಧಿಕಾರಿ ಮಂಜುನಾಥ ಯಡಹಳ್ಳಿ ಅವರನ್ನು ನೇಮಕಗೊಳಿಸಿ, ಜಿಲ್ಲಾಧ್ಯಕ್ಷ ಎಸ್.ಎಫ್.ಸಿದ್ದನಗೌಡರ ಆದೇಶಿಸಿದ್ದಾರೆ.
ಅವರು ಇಂದು ಸಂಜೆ ರಾಜ್ಯ ಸರಕಾರಿ ನೌಕರ ಸಂಘದ ಸಾಂಸ್ಕೃತಿಕ ಸಭಾಭವನದಲ್ಲಿ ಜರುಗಿದ ಜಿಲ್ಲಾ ಪದಾಧಿಕಾರಿಗಳ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ, ಈ ನೇಮಕ ಪ್ರಕಟಿಸಿದರು.
ಮಂಜುನಾಥ ಯಡಹಳ್ಳಿ ಅವರು ಈಗಾಗಲೇ ಸಂಘದ ಕಾರ್ಯದರ್ಶಿಯಾಗಿ ಉತ್ತಮ ರೀತಿಯಿಂದ ಕರ್ತವ್ಯ ನಿರ್ವಹಿಸಿದ್ದಾರೆ.
ಎಸ್.ಜಿ. ಸುಬ್ಬಾಪುರಮಠ ಅವರ ನಿವೃತ್ತಿಯಿಂದ ತೆರವಾದ ಸ್ಥಾನಕ್ಕೆ ಸಭೆಯ ಒಪ್ಪಿಗೆ ಪಡೆದು, ಜಿಲ್ಲಾಧ್ಯಕ್ಷರು ಜಿಲ್ಲಾ ನೂತನ ಕಾರ್ಯದರ್ಶಿ ಯಾಗಿ ಮಂಜುನಾಥ ಯಡಹಳ್ಳಿ ಅವರ ಹೆಸರು ಘೋಷಿಸಿದರು.
ಇದೇ ಸಂದರ್ಭದಲ್ಲಿ ಸಂಘದ ಜಿಲ್ಲಾ ಘಟಕ್ಕೆ ನೂತನ ಹಿರಿಯ ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ ಸೊಲಗಿ ಅವರನ್ನು ನೇಮಿಸಲಾಯಿತು.
ನೂತನವಾಗಿ ನೇಮಕವಾದ ಇಬ್ಬರೂ ಪದಾಧಿಕಾರಿಗಳಿಗೆ ಜಿಲ್ಲಾ ಅಧ್ಯಕ್ಷ ಎಸ್.ಎಪ್.ಸಿದ್ದನಗೌಡರ ಅವರು ನೇಮಕಾತಿ ಪ್ರಮಾಣಪತ್ರ ನೀಡಿದರು.
ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಮತ್ತು ಕನ್ನಡ ಸಾಹಿತ್ಯ ಪರಿಷತ್ ಕಲಘಟಗಿ ತಾಲೂಕು ಅಧ್ಯಕ್ಷರಾಗಿ ನೇಮಕವಾಗಿರುವ ಶಿಕ್ಷಕ ಐ.ವ್ಹಿ. ಜವಳಿ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.