ಧಾರವಾಡ‌ ಜಿಲ್ಲಾ ಮಟ್ಟದ ನಾರ್ಕೋ ಸಮನ್ವಯ ಸಮಿತಿ ಸಭೆ

ನಿನ್ನೆ ಬೆಳಿಗ್ಗೆ ಕಚೇರಿ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ ರಚಿತವಾಗಿರುವ ಜಿಲ್ಲಾಮಟ್ಟದ ನಾರ್ಕೋ ಸಮನ್ವಯ ಸಮಿತಿಯ ಪ್ರಥಮ ಸಭೆ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮಾತನಾಡಿದರು.

ಗಾಂಜಾ, ಅಫೀಮು ಸೇರಿದಂತೆ ಅಮಲು ತರಿಸುವ ಪದಾರ್ಥಗಳನ್ನು ಬಳಸದಂತೆ ಮುಂಜಾಗೃತೆ ವಹಿಸಿ, ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವುದು ಎಲ್ಲ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯಾಗಿದೆ.

ಕಾಲೇಜು ಕ್ಯಾಂಪಸ್ ಮತ್ತು ವಿದ್ಯಾರ್ಥಿ ವಸತಿ ನಿಲಯಗಳಿಗೆ ಅಧಿಕಾರಿಗಳು ಆಗಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸುತ್ತಾರೆ. ಅಪರಾಧ ಕಂಡುಬಂದಲ್ಲಿ ತಕ್ಷಣ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.

 ಜಿಲ್ಲೆಯ ಪ್ರತಿ ಪೌಢಶಾಲೆ, ಪಿಯು, ಪದವಿ ಕಾಲೇಜುಗಳಲ್ಲಿ ಮತ್ತು ಎಲ್ಲ ವಿಶ್ವವಿದ್ಯಾಲಯಗಳಲ್ಲಿ ಡ್ರಗ್ಸ್ ಮತ್ತು ಅಪರಾಧ, ಕುಂದುಕೊರತೆಗಳ ಕುರಿತು ಮನವಿ, ದೂರು ಸಲ್ಲಿಸಲು ಅನುಕೂಲವಾಗುವಂತೆ ದೂರು ಸ್ವೀಕಾರ ಬಾಕ್ಸ್ ಅಳವಡಿಸಬೇಕು.

ಡ್ರಗ್ಸ್ ಸೇವನೆ, ಪೂರೈಕೆ, ಮಾರಾಟ ಎಲ್ಲವೂ ಅಪರಾಧವಾಗಿದ್ದು, ಪೊಲೀಸ್ ಇಲಾಖೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.

ಕೋಫ್ಟ್ ಕಾಯ್ದೆ ಈಗಾಗಲೇ ಜಾರಿಯಲ್ಲಿದ್ದು, ಹಾಸ್ಟೇಲ್, ಕಾಲೇಜ್ ಕ್ಯಾಂಪಸ್‍ಗಳಲ್ಲಿ ತಂಬಾಕು ಸೇವನೆ ಅಪರಾಧವಾಗಿದೆ. ಈ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದರು.

 ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿ ಸಮೂಹ ಮತ್ತು ಯುವ ಸಮುದಾಯ ಡ್ರಗ್ಸ್ ಬಲೆಗೆ ಬೀಳದೆ ಉತ್ತಮ ಪ್ರಜೆಗಳಾಗಬೇಕು.

ಅವರಲ್ಲಿ ಗಾಂಜಾ, ಅಫೀಮುದಂತಹ ಅಮಲು ಪದಾರ್ಥಗಳಿಂದ ದೂರವಿರಲು ಮತ್ತು ಅಂತಹ ವ್ಯಸನಕ್ಕೆ ಒಳಗಾಗದಂತೆ ಮುನ್ನೆಚ್ಚರಿಕೆ ವಹಿಸಿ, ಜಾಗೃತಿ ಮೂಡಿಸಲು ಸರ್ಕಾರ ಜಿಲ್ಲಾಮಟ್ಟದ ನಾರ್ಕೋ ಸಮಿತಿ ರಚಿಸಿದೆ.

ಯುವಕರು ಅದರಲ್ಲೂ ವಿಶೇಷವಾಗಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಎಲ್ಲ ಶಿಕ್ಷಣ ಸಂಸ್ಥೆಗಳು ಡ್ರಗ್ಸ್ ದುಶ್ಚಟಗಳ ಬಗ್ಗೆ ಎಚ್ಚರಿಕೆ ವಹಿಸಬೇಕೆಂದು ಹೇಳಿದರು.

 ಪ್ರತಿ ಕಾಲೇಜು, ವಿಶ್ವವಿದ್ಯಾಲಯ, ಶಿಕ್ಷಣ ಸಂಸ್ಥೆಗಳು ಅಮಲು ಪದಾರ್ಥಗಳಿಂದ ದೂರವಿರುವಂತೆ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು.

ಕ್ಲಾಸ್‍ರೂಮ್, ಕ್ಯಾಂಪಸ್, ಹಾಸ್ಟೇಲ್ ಮತ್ತು ಕ್ಯಾಂಪಸ್ ಸಮೀಪದ ದಾಬಾಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಈ ಕುರಿತು ಪರಿಶೀಲಿಸಬೇಕೆಂದು ಎಸ್.ಪಿ. ಸೂಚಿಸಿದರು.

ಮುಖ್ಯವಾಗಿ ಧಾರವಾಡ, ಹುಬ್ಬಳ್ಳಿ ಗ್ರಾಮೀಣ, ಕಲಘಟಗಿ, ಅಳ್ನಾವರ ಸೇರಿ ಎಲ್ಲ ತಾಲೂಕುಗಳಲ್ಲಿ ಕಬ್ಬು ಹಾಗೂ ಇತರ ವಾರ್ಷಿ ಬೆಳೆಗಳಲ್ಲಿ ಗಾಂಜಾ ಬೆಳೆಸುವ ಬಗ್ಗೆ ಕೃಷಿ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಗಾಂಜಾ ಬೆಳೆ ಕಂಡುಬಂದಲ್ಲಿ ಹತ್ತಿರದ ಪೊಲೀಸ್ ಠಾಣೆ ಅಥವಾ ಜಿಲ್ಲಾ ಕಚೇರಿಗೆ ಮಾಹಿತಿ ನೀಡಬೇಕೆಂದು ಅವರು ತಿಳಿಸಿದರು.

 ಅರಣ್ಯ ಪ್ರದೇಶದಲ್ಲಿಯೂ ಮತ್ತು ಭರಿಸುವ ಪದಾರ್ಥಗಳನ್ನು ಕೆಲವು ಅಕ್ರಮವಾಗಿ ನುಸುಳಿ ಬೆಳೆಯುತ್ತಾರೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ನಿರಂತರ ನಿಗಾವಹಿಸಿ ಕರಮ ಕೈಗೊಳ್ಳಬೇಕೆಂದು ಎಸ್.ಪಿ. ಅವರು ತಿಳಿಸಿದರು.

ಎಲ್ಲ ಕಾಲೇಜು, ವಿವಿಗಳಲ್ಲಿ ಡ್ರಗ್ಸ್ ಅಪರಾಧ ಕೃತ್ಯಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಸರಿಯಾದ ತಿಳುವಳಿಕೆ, ಕಾನೂನು ಕ್ರಮದ ಬಗ್ಗೆ ಅರಿವು ಮೂಡಿಸುವುದು ಆಯಾ ಶಿಕ್ಷಣ ಸಂಸ್ಥೆಗಳ ಜವಾಬ್ದಾರಿ.

ಈ ಕುರಿತು ವರದಿಯನ್ನು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಗೆ ಸಲ್ಲಿಸುವಂತೆ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ್ ತಿಳಿಸಿದರು.

Share this article!

Leave a Reply

Your email address will not be published. Required fields are marked *

error: Content is protected !!