ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ 2018-19, 2019-20, 2020-21 ಮತ್ತು 2021-22 ಜುಲೈ ಆವೃತ್ತಿ ಸಾಲಿನಲ್ಲಿ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕ ಭರಿಸಲು ಡಿ.26 ರ ವರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ.
ಪ್ರಸಕ್ತ 2022-23ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ, ತೃತೀಯ, ಬಿಎ, ಬಿಕಾಂ, ಬಿಬಿಎ. ಬಿಸಿಎ ಹಾಗೂ ಬಿಎಸ್ಸಿ, ಎಂಎ, ಎಂಸಿಜೆ, ಎಂ.ಕಾಂ, ಎಂಎಸ್ಸಿ, ಎಂಬಿಎ, ಪದವಿಗಳು ನವೀಕರಣಕ್ಕಾಗಿ ಬೋಧನಾ ಶುಲ್ಕ ಪಾವತಿಸಲು ದಂಡ ಶುಲ್ಕವಿಲ್ಲದೆ ಡಿಸೆಂಬರ್ 9 ಹಾಗೂ 200 ದಂಡ ಶುಲ್ಕದೊಂದಿಗೆ ಡಿ.15 ನಂತರ 400 ದಂಡ ಶುಲ್ಕದೊಂದಿಗೆ ಡಿ.26 ಕೊನೆಯ ದಿನವಾಗಿದೆ.
ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಶುಲ್ಕ ಪಾವತಿಸಬಹುದು.
ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡ ಮೊದಲ ವರ್ಷ ಪ್ರವೇಶಾತಿ ಪಡೆದಿದ್ದ ಕೇಂದ್ರ ಕಚೇರಿ ಅಥವಾ ಪ್ರಾದೇಶಿಕ ಕೇಂದ್ರಕ್ಕೆ ನಿಗದಿಪಡಿಸಿದ ದಿನಾಂಕದೊಳಗೆ ಅರ್ಜಿ ಸಲ್ಲಿಸಿ ಸಿದ್ಧಪಾಠಗಳನ್ನು ಪಡೆಯಬಹುದು ಎಂದು ಡಾ. ಎಚ್. ಮಲ್ಲಿಕಾರ್ಜುನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಧಾರವಾಡ ಪ್ರಾದೇಶಿಕ ಕೇಂದ್ರ, ಕೆಸಿಡಿ ರಸ್ತೆ, ಎಲ್‍ಐಸಿ ಮುಂಭಾಗ, ಯುನಿವರ್ಸಟಿ ಪಬ್ಲಿಕ್ ಶಾಲೆ ಆವರಣ, ದೂ.ಸಂ: 0836-2441199, 7892597159 ಸಂಪರ್ಕಿಸಬಹುದೆಂದು ಪ್ರಾದೇಶಿಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.