ಚಿಗರಿ ಬಿ.ಆರ್.ಟಿ.ಎಸ್ ಬಸ್ ಸಂಚಾರ ಕಾರ್ಯಾಚರಣೆಯಲ್ಲಿ ಬದಲಾವಣೆ

ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣ ನವೀಕರಣದ ಕಾಮಗಾರಿಯು ಪೂರ್ಣ ಪ್ರಮಾಣದಲ್ಲಿ ಪ್ರಾರಂಭವಾಗಿರುವದರಿಂದ ಮೇ.9ರಿಂದ ಚಿಗರಿ ಬಿ.ಆರ್.ಟಿ.ಎಸ್ ತಡೆ ರಹಿತ ಬಸ್ಸುಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ಮಾಡಲಾಗಿರುತ್ತದೆ.

ಹಳೆ ಬಸ್ ನಿಲ್ದಾಣದ ಬದಲಾಗಿ ಎದುರುಗಡೆ ಇರುವ ರಾಣಿ ಚೆನ್ನಮ್ಮ ಬಿ.ಆರ್.ಟಿ.ಎಸ್ ಬಸ್ ನಿಲ್ದಾಣದಿಂದ ಚಿಗರಿ ಬಸ್ಸುಗಳ ಸೌಲಭ್ಯವನ್ನು ಪ್ರಯಾಣಿಕರು ಪಡೆಯಬಹುದಾಗಿದೆ.

ಹುಬ್ಬಳ್ಳಿ ಹಳೇ ಬಸ್ ನಿಲ್ದಾಣದಿಂದ ಚಿಗರಿ ಬಸ್ಸುಗಳು ಕಾರ್ಯಾಚರಿಸುವುದನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

ಈ ವೀಡಿಯೊ ವೀಕ್ಷಿಸಿ: ಹುಬ್ಬಳ್ಳಿಯ ಬಿ.ಆರ್.ಟಿ.ಎಸ್ ರಸ್ತೆ

100 ಡಿ ಮಾರ್ಗ ಬದಲಾಗಿ 100 ಬಿ ಮಾರ್ಗದ ಮೇಲೆ ಎಲ್ಲಾ ತಡೆರಹಿತ ಬಸ್ಸುಗಳು ಹುಬ್ಬಳ್ಳಿ ರೈಲ್ವೆ ಸ್ಟೇಷನ್ ನಿಂದ ಧಾರವಾಡ ಟರ್ಮಿನಲ್‌ (ಮಿತ್ರ ಸಮಾಜ) ದವರೆಗೆ ಕಾರ್ಯಾಚರಣೆ ನಡೆಸಲಿವೆ.

ತಡೆರಹಿತ 100 ಬಿ ಬಸ್ ಗಳು ರೈಲ್ವೆ ಸ್ಟೇಷನ್ ಹುಬ್ಬಳ್ಳಿಯಿಂದ ಹೆಚ್ಚುವರಿಯಾಗಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ (ಬಿ.ಎಸ್.ಎನ್.ಎಲ್), ಮಹಾನಗರ ಪಾಲಿಕೆ, ಧಾರವಾಡ ಗಾಂಧಿನಗರ ಬಸ್ ನಿಲ್ದಾಣಗಳಲ್ಲಿಯೂ ಸಹ ನಿಲುಗಡೆ ಸೌಲಭ್ಯ ಕಲ್ಪಿಸಲಾಗಿದೆ.

ಹುಬ್ಬಳ್ಳಿಯ ಹಳೇ ಬಸ್ ನಿಲ್ದಾಣದ ಸ್ಮಾರ್ಟ್ ಕಾರ್ಡ್ ಪಡೆಯುವ ಕೌಂಟರ್ ನ್ನು ಪ್ರಾದೇಶಿಕ ಬಸ್ ನಿಲ್ದಾಣ ಹೊಸೂರುಗೆ ಸ್ಥಳಾಂತರ ಮಾಡಲಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 180059 91010 ಸಂಪರ್ಕಿಸಬಹುದು ಎಂದು ಬಿ.ಆರ್.ಟಿ. ಎಸ್ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!