ಜಿಲ್ಲಾ ಪಂಚಾಯತ್, ತಾಲೂಕ ಪಂಚಾಯತ್ ಹಾಗೂ ಗ್ರಾಮ ಪಂಚಾಯತ್ ನೌಕರರುಗಳಿಗೆ ವೈದ್ಯಕೀಯ ತಪಾಸಣೆ ಮಾಡುವುದು ಅವಶ್ಯವಿರುತ್ತದೆ.
ಕಾರ್ಯನಿರ್ವಹಿಸುತ್ತಿರುವ ನೌಕರರು ಹಾಗೂ ಸಿಬ್ಬಂದಿಗಳೀಗೆ ಆರೋಗ್ಯ ತಪಾಸಣೆ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ. ಸುರೇಶ ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಪ್ರತಿ ಸಿಬ್ಬಂದಿಗೆ ಆಧ್ಯತೆ ಮೇರೆಗೆ, ಇಸಿಜಿ, ಹಿಮೋಗ್ಲೋಬಿನ್ ಪರೀಕ್ಷೆ, ರಕ್ತದೋತ್ತಡ, ಸಕ್ಕರೆ ಖಾಯಿಲೆ ಪರೀಕ್ಷೆ ಮಾಡಲಾಗುತ್ತದೆ.
ಅಲ್ಲದೇ ಥೈರಾಯರ್ಸ್ ಪರೀಕ್ಷೆ, ಕೊಲೆಸ್ಟ್ರಾಲ್ ಪರೀಕ್ಷೆ, ಓರಲ್ ಕ್ಯಾನರ್ ಸ್ಕ್ರಿನಿಂಗ್, ಸರ್ವಿಕಲ್ ಆ್ಯಂಡ್ ಬ್ರಿಸ್ಟ್ ಕ್ಯಾನ್ಸರ್ ಪರೀಕ್ಷೆಗಳನ್ನು ಮಾಡಲಾಗುವುದು.
ನವೆಂಬರ್ 28 ರಿಂದ ಜಿಲ್ಲಾ ಪಂಚಾಯತ್, ಧಾರವಾಡ ತಾಲೂಕು ಪಂಚಾಯತ್, ಧಾರವಾಡ, ಅಳ್ನಾವರದ ಅಂದಾಜು 359 ನೌಕರರಿಗೆ ಜಿಲ್ಲಾ ಪಂಚಾಯತ್ ಸಭಾಭವನದಲ್ಲಿ ಪರೀಕ್ಷೆಗಳನ್ನು ಮಾಡಲಾಗುವುದು.
ತಾಲೂಕು ಪಂಚಾಯತ್ ನವಲಗುಂದ ಹಾಗೂ ಅಣ್ಣಿಗೇರಿಯ 218 ನೌಕರರಿಗೆ, ನವೆಂಬರ್ 29 ರಂದು ಹುಬ್ಬಳ್ಳಿ ತಾಲೂಕು ಪಂಚಾಯತಿಯ 303 ನೌಕರರಿಗೆ ಪರೀಕ್ಷೆಗಳನ್ನು ಮಾಡಲಾಗುವುದು.
ನ.30 ರಂದು ಕುಂದಗೋಳ ತಾಲೂಕು ಪಂಚಾಯಿತಿಯ 225 ನೌಕರರಿಗೆ, ಡಿಸೆಂಬರ್ 1 ರಂದು ಕಲಘಟಗಿ ತಾಲೂಕು ಪಂಚಾಯಿತಿ 238 ನೌಕರರಿಗೆ ಪರೀಕ್ಷೆಗಳನ್ನು ಮಾಡಲಾಗುವುದು.
ಆಯಾ ತಾಲೂಕು ಪಂಚಾಯಿತಿ ಆವರಣಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಆರೋಗ್ಯ ತಪಾಸಣೆ ನಡೆಯುವುದು ಎಂದು ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ.ಸುರೇಶ ಇಟ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.