ತಿರಸ್ಕೃತಗೊಂಡ ಬೆಳೆ ವಿಮೆ ಗೆ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ

2020-21ನೇ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ರೈತರ ಬೆಳೆ ವಿಮೆ ಪ್ರಸ್ತಾವನೆಗಳು ಸಮೀಕ್ಷೆಯಡಿ ದಾಖಲಾದ ಬೆಳೆ ಹಾಗೂ ಬೆಳೆ ವಿಮೆ ಮಾಡಿಸಿದ ಬೆಳೆಯು ಹೊಂದಾಣಿಕೆಯಾಗದೇ ವಿಮಾ ಸಂಸ್ಥೆಯವರಿಂದ ತಿರಸ್ಕೃತಗೊಂಡಿರುತ್ತವೆ.

ಅಂತಹ ತಿರಸ್ಕೃತಗೊಂಡಿರುವ ಬೆಳೆ ವಿಮಾ ಪ್ರಸ್ತಾವನೆಗಳ ರೈತರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಪ್ರದರ್ಶಿಸಲಾಗಿದೆ.

ಸಂಬಂಧಪಟ್ಟ ರೈತರು ಅಕ್ಷೇಪಣೆ ಇದ್ದಲ್ಲಿ ಡಿಸೆಂಬರ್ 10, 2022 ರ ಒಳಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಧಾರವಾಡಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು.

ಆಕ್ಷೇಪಣೆಯೊಂದಿಗೆ 2020-21 ರ ಪಹಣಿ ಪತ್ರಿಕೆಯಲ್ಲಿ (ಆರ್‍ಟಿಸಿ) ನಮೂದಾಗಿರಬೇಕು. ವಿಮೆಗೆ ನೋಂದಾಯಿಸಿದ ಬೆಳೆ ವಿಮೆ ಮಾಡಿಸಿದ ಬೆಳೆಗೆ ಬೆಂಬಲ ಬೆಲೆ ಪ್ರಯೋಜನ ಪಡೆದಲ್ಲಿ ರಶೀದಿ ಸಲ್ಲಿಸುವುದು.

ವಿಮೆಗೆ ನೋಂದಾಯಿತ ಬೆಳೆಯ ಉತ್ಪನ್ನವನ್ನು ಎಪಿಎಂಸಿ ಮಾರುಕಟ್ಟೆಗೆ ಮಾರಾಟ ಮಾಡಿದಲ್ಲಿ ದಾಖಲೆ ಸಲ್ಲಿಸುವುದು.

ಅದೇ ರೀತಿ 2019-20, 2020-21 ಮತ್ತು 2021-22ನೇ ಸಾಲಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ವಿವಿಧ ಬೆಳೆಗಳಿಗೆ ವಿಮಾ ಮಂಜೂರಾಗಿದೆ.

ಕೆಲವೊಂದು ರೈತರ ಖಾತೆಗೆ ಆಧಾರ ಕಾರ್ಡ್ ಲಿಂಕ್ ಆಗದೆ ಇರುವ ಕಾರಣಕ್ಕೆ ವಿಮಾ ಮೊತ್ತವು ರೈತರಿಗೆ ಜಮೆಯಾಗಿರುವುದಿಲ್ಲ.

ಆದ್ದರಿಂದ ಗ್ರಾಮ ಪಂಚಾಯತಿ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಛೇರಿಯಲ್ಲಿ ಪ್ರದರ್ಶಿಸಲಾಗಿರುವ ರೈತರು ಕೂಡಲೇ ತಮ್ಮ ಬ್ಯಾಂಕ್‍ಗೆ ಭೇಟಿ ಮಾಡಿ ಎನ್‍ಪಿಸಿಎಲ್ ಮ್ಯಾಪಿಂಗ್ ಮಾಡಿಸಬೇಕು.

ಅಥವಾ ಹತ್ತಿರದ ಪೋಸ್ಟ್ ಆಫೀಸ್‍ನಲ್ಲಿ ಹೊಸ ಖಾತೆ ತೆರೆಯಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ ಸುಷ್ಮಾ ಮಳಿಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!