ಕೃಷಿ ಬೆಳೆ ಹಾಗೂ ತೋಟಗಾರಿಕೆ ಬೆಳೆಹಾನಿಗೆ ಒಟ್ಟು 1,11,780 ರೈತರಿಗೆ 199.37 ಕೋಟಿ ಪರಿಹಾರ

ಧಾರವಾಡ ಜಿಲ್ಲೆಯಾದ್ಯಂತ ಜೂನ್ ತಿಂಗಳಿನಿಂದ ಅಕ್ಟೋಬರ್ ವರೆಗೆ ಸುರಿದ ಮಳೆಯಿಂದಾಗಿ 164154 ಹೆಕ್ಟರ್ ಪ್ರದೇಶದಲ್ಲಿ ಕೃಷಿ ಬೆಳೆ ಹಾನಿಯಾಗಿದೆ.

ಹಾಗೂ 14233.81 ಹೆಕ್ಟರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆಹಾನಿ ಒಟ್ಟಾರೆಯಾಗಿ 178378.81 ಹೆಕ್ಟರ್ ಪ್ರದೇಶದಲ್ಲಿ ಬೆಳೆ ಹಾನಿ ವರದಿಯಾಗಿದೆ.

ಬೆಳೆಹಾನಿಯಾದ ರೈತರಿಗೆ ವಿವರಗಳನ್ನು ಪೋರ್ಟಲ್ ನಲ್ಲಿ ದಾಖಲಿಸಲಾಗಿದ್ದು, ಇವರೆಗೆ ಜಿಲ್ಲೆಯಲ್ಲಿ 1,11,780 ರೈತರಿಗೆ 199.37 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ಡಿ.ಬಿ.ಟಿ ಮುಖಾಂತರ ಮುಖಾಂತರ ರೈತರಿಗೆ ಪಾವತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಧಾರವಾಡ ಜಿಲ್ಲೆಯಲ್ಲಿ 15,541 ಫಲಾನುಭವಿಗಳಿಗೆ ರೂ.27.22 ಕೋಟಿ, ಅಳ್ಳಾವರ ತಾಲೂಕಿನ 1120 ಫಲಾನುಭವಿಗಳಿಗೆ ರೂ.1.52 ಕೋಟಿ ನೀಡಲಾಗಿದೆ.

ಕಲಘಟಗಿ ತಾಲೂಕಿನ 15143 ಫಲಾನುಭವಿಗಳಿಗೆ ರೂ.23.69 ಕೋಟಿ, ಕುಂದಗೋಳ ತಾಲೂಕಿನ 25796 ಫಲಾನುಭವಿಗಳಿಗೆ ರೂ.46.49 ಕೋಟಿ ನೀಡಲಾಗಿದೆ.

ಹುಬ್ಬಳ್ಳಿ ತಾಲೂಕಿನ 17574 ಫಲಾನುಭವಿಗಳಿಗೆ ರೂ.31.92 ಕೋಟಿ, ಹುಬ್ಬಳ್ಳಿ ನಗರ ತಾಲ್ಲೂಕಿನ 1931 ಫಲಾನುಭವಿಗಳಿಗೆ ರೂ.3.47 ಕೋಟಿ ನೀಡಲಾಗಿದೆ.

ನವಲಗುಂದ ತಾಲ್ಲೂಕಿನ 22757 ಫಲಾನುಭವಿಗಳಿಗೆ ರೂ.43.03 ಕೋಟಿ, ಅಣ್ಣಿಗೇರಿ 11918 ಫಲಾನುಭವಿಗಳಿಗೆ ರೂ.22.03 ಕೋಟಿ, ಒಟ್ಟು 111780 ಫಲಾನುಭವಿಗಳಿಗೆ ರೂ.199.37 ಕೋಟಿ ಪರಿಹಾರವನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!