ಸುಕನ್ಯಾ ಸಮೃದ್ಧಿ: ದಾಖಲೆ ಸಲ್ಲಿಸಲು ಸೂಚನೆ

ಸುಕನ್ಯಾ ಸಮೃದ್ಧಿ ಯೋಜನೆಯು 2015 ಜ. 22 ಕ್ಕೆ ಜಾರಿಗೆ ಬಂದಿತ್ತು.

ಆಗ 10 ವರ್ಷ ವಯಸ್ಸಿನಲ್ಲಿ ಈ ಖಾತೆ ತೆರೆದ ಹೆಣ್ಣು ಮಕ್ಕಳಿಗೆ ಮುಂದಿನ ತಿಂಗಳು 18 ವರ್ಷ ಪೂರ್ಣಗೊಳ್ಳುತ್ತಿದೆ.

ಈ ವರ್ಷ 18 ವರ್ಷ ತಲುಪುವ ಖಾತೆದಾರರು, ಖಾತೆಯನ್ನು ಪ್ರೌಢ ವಯಸ್ಕ ಖಾತೆಯಾಗಿ ಪರಿವರ್ತಿಸಲು, ತಮ್ಮ ಖಾತೆ ಹೊಂದಿರುವ ಅಂಚೆ ಕಚೇರಿಗೆ ಅಥವಾ ತಮ್ಮ ಈಗಿನ ವಾಸ ಸ್ಥಳದ ಸಮೀಪದ ಅಂಚೆ ಕಚೇರಿಗೆ ತೆರಳಿ ಪೂರಕ ದಾಖಲೆಗಳನ್ನು ಸಲ್ಲಿಸಬೇಕು.

ಈ ಅರ್ಜಿ ಫಾರ್ಮ ಅಂಚೆ ಕಚೇರಿಯಲ್ಲಿ ಲಭ್ಯವಿದೆ ಎಂದು ಅಂಚೆ ಇಲಾಖೆಯ ಹಿರಿಯ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!