ಶಿರೂರು ರೇಲ್ವೆ ಮೇಲ್ಸೇತುವೆ: ಮಾರ್ಚ್ 16ರ ವರೆಗೆ ಸಂಚಾರ ನಿಷೇಧ

ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಮಂಗಸೂಳಿ – ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯಲ್ಲಿನ ಶಿರೂರು ಗ್ರಾಮದ ರೇಲ್ವೆ ಸೇತುವೆ ದುರಸ್ತಿ ಕಾಮಗಾರಿ ಬಹುತೇಕ ಶೇ.90 ರಷ್ಟು ಮುಕ್ತಾಯವಾಗಿದೆ.

ಅಂತಿಮ ಹಂತದ ಕಾಮಗಾರಿ ಕೈಗೊಳ್ಳಲು ಈ ಮಾರ್ಗದ ವಾಹನ ಸಂಚಾರವನ್ನು ಫೆಬ್ರವರಿ 25 ರಿಂದ ಮಾರ್ಚ 16ರ ವರೆಗೆ ನಿಷೇಧಿಸಲಾಗಿದೆ.

ಪರ್ಯಾಯ ಮಾರ್ಗವಾಗಿ ಸಂಶಿ-ಬಸಾಪೂರ-ಶಿರೂರು, ಸಂಶಿ-ಹಿರೇನರ್ತಿ-ಕುಂದಗೋಳ ಅಥವಾ ಸಂಶಿ-ರೊಟ್ಟಿಗವಾಡ-ಹುಬ್ಬಳ್ಳಿ ಮಾರ್ಗಗಳ ಮೂಲಕ ಸಂಚರಿಸಬಹುದು.

ಸಾರ್ವಜನಿಕರು ಸಹಕರಿಸಬೇಕೆಂದು‌ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಾದ ಎಸ್.ಬಿ. ಚೌಡಣ್ಣವರ ಪ್ರಕಟಣೆಯಲ್ಲಿ ಕೋರಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!