ಹುಬ್ಬಳ್ಳಿಯ ಪ್ರಮುಖ ಪ್ರದೇಶಗಳಿಂದ ಪ್ರಿ ಪೇಯ್ಡ್ ಆಟೋ ಸೇವೆಗೆ ಚಿಂತನೆ

ಪ್ರಯಾಣಿಕರ ಹಿತದೃಷ್ಟಿಯಿಂದ ನಗರದ ರೈಲ್ವೆ ನಿಲ್ದಾಣ, 3 ಮುಖ್ಯ ಬಸ್ ನಿಲ್ದಾಣಗಳು ಮತ್ತು ವಿಮಾನ ನಿಲ್ದಾಣಗಳಲ್ಲಿ ಪ್ರಿ ಪೇಯ್ಡ್ ಆಟೋ ಸೇವೆಗೆ ಅವಕಾಶ ಕಲ್ಪಿಸಲು ಚಿಂತನೆ ನಡೆಸಲಾಗುತ್ತಿದೆ.

ಈ ಕುರಿತು ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗುವುದು‌ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಹೇಳಿದರು.

ಪ್ರಿ ಪೇಯ್ಡ್ ಆಟೋ ಸೇವೆ ಪ್ರಾರಂಭಿಸಿದ ನಂತರ ಪ್ರಯಾಣಿಕರು ರಾತ್ರಿ ವೇಳೆಯಲ್ಲಿ ಭಯಪಡದೆ ಪ್ರಯಾಣಿಸಲು ಅನೂಕೂಲವಾಗಲಿದೆ.

ಅಲ್ಲದೇ ಸಹಾಯವಾಣಿ ಸಂಖ್ಯೆಯನ್ನು ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುವುದು. ಆಟೋಗಳಿಗೆ ಮೀಟರ್ ಅಳವಡಿಕೆಗೆ ಗಡುವು ನೀಡಲಾಗಿದೆ ಎಂದು ತಿಳಿಸಿದರು. 

Share this article!

One thought on “ಹುಬ್ಬಳ್ಳಿಯ ಪ್ರಮುಖ ಪ್ರದೇಶಗಳಿಂದ ಪ್ರಿ ಪೇಯ್ಡ್ ಆಟೋ ಸೇವೆಗೆ ಚಿಂತನೆ

  1. Is it possible in Hubballi – Dharwad ? Even OLA service is not available from Hubballi railway station to various locations.

Leave a Reply

Your email address will not be published. Required fields are marked *

error: Content is protected !!