ನವಲಗುಂದ ವಿಧಾನಸಭಾ ಮತಕ್ಷೇತ್ರದ ಮತದಾರರ ಯಾದಿಯ ಸಂಕ್ಷೀಪ್ತ ವಿಶೇಷ ಪರಿಷ್ಕರಣೆ ಕಾರ್ಯದ ಅಂಗವಾಗಿ ಬುಧವಾರದಂದು ನವಲಗುಂದ ತಾಲೂಕಿನ ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಭೆ ಏರ್ಪಡಿಸಲಾಗಿತ್ತು.
ತಹಶೀಲ್ದಾರ ಅನೀಲ ಬಡಿಗೇರ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳ ಸಭೆಯನ್ನು ಜರುಗಿಸಲಾಯಿತು.
ಸಭೆಯಲ್ಲಿ ಬಿ.ಜಿ.ಪಿ. ಪಕ್ಷದ ಅನ್ನಪ್ಪ ಭಾಗಿ ಹಾಗೂ ಕಾಂಗ್ರೆಸ್ ಪಕ್ಷದ ಪ್ರವೀಣ ಮೂಗಣ್ಣವರ, ಪುಟ್ನಂಜ ಹೆರಗಣ್ಣವರ ಹಾಗೂ ಎಂ.ಎನ್. ನಾಯ್ಕರ ಹಾಗೂ ಇತರೇ ಪ್ರಮುಖ ಮುಖಂಡರು ಹಾಜರಿದ್ದರು.
ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯ ಭಾಗವಾಗಿ ಮತದಾರರ ಸೇರ್ಪಡೆ, ಬಿಟ್ಟು ಬಿಡತಕ್ಕವುಗಳು, ತಿದ್ದುಪಡಿ, ಸ್ಥಳಾಂತರ, ಯುವ ಮತದಾರರು, ವಿಶೇಷ ಚೇತನರು, ಸರ್ವೀಸ್ ವೋಟರ್ಸ ಕುರಿತು ವಿವರವಾಗಿ ಸಭೆಯಲ್ಲಿ ಚರ್ಚಿಸಲಾಯಿತು.