ನಂದಿನಿ ಸಿಹಿ ಉತ್ಸವದಲ್ಲಿ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ

ಮುಂದಿನ ಒಂದು ತಿಂಗಳ ಕಾಲ ನಂದಿನಿ ಸಿಹಿ ಉತ್ಸವ ನಡೆಯಲಿದ್ದು, ಉತ್ಸವದಲ್ಲಿ ನಂದಿನಿಯ ಸುಮಾರು 70 ಉತ್ಪನ್ನಗಳಲ್ಲಿ 30 ಸಿಹಿ ಉತ್ಪನ್ನಗಳಿಗೆ ಶೇ.20ರಷ್ಟು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು.

ಪ್ರತಿಯೊಬ್ಬ ಗ್ರಾಹಕರು ಗುಣಮಟ್ಟಯುಕ್ತ ನಂದಿನಿ ಉತ್ಪನ್ನಗಳ ಬಳಕೆ ಮಾಡುವಂತೆ ರಾಬಕೋವಿ ಜಿಲ್ಲಾ ಹಾಲು ಒಕ್ಕೂಟದ ನಿದೇಶಕರಾದ ಜಿ.ವೀರಶೇಖರರೆಡ್ಡಿ ಅವರು ಹೇಳಿದರು.

ಸೋಮವಾರದಂದು ಬ‌ಳ್ಳಾರಿಯ ಪಟೇಲ್ ನಗರದ ಪಾರ್ಕ್ ಎದುರುಗಡೆಯ ನಂದಿನಿ ಎ.ಟಿ.ಎಂ ಪಾರ್ಲರ್ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ‘ನಂದಿನಿ ಸಿಹಿ ಉತ್ಸವ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯಾದ್ಯಾಂತ 14 ಒಕ್ಕೂಟಗಳಿದ್ದು ಕರ್ನಾಟಕ ಹಾಲು ಮಂಡಳಿ ವತಿಯಿಂದ ಕಳೆದ 15 ವರ್ಷಗಳಿಂದ ನಂದಿನಿ ಸಿಹಿ ಉತ್ಸವ ಕಾರ್ಯಕ್ರಮವನ್ನು ನಿರಂತರವಾಗಿ ಹಮ್ಮಿಕೊಳ್ಳತ್ತಾ ಬರಲಾಗಿದೆ ಎಂದು ಹೇಳಿದರು.

ನಂದಿನಿ ಸಿಹಿ ಉತ್ಸವದಲ್ಲಿ ಮೈಸೂರ್ ಪಾಕ್, ಧಾರವಾಡ ಪೇಡಾ, ಬೆಳಗಾಂ ಕುಂದ, ಏಲಕ್ಕಿ ಪೇಡಾ, ಬಾದಾಮ್ ಪೇಡಾ, ಬೆಸನ್ ಲಡ್ಡು, ಸಿರಿಧಾನ್ಯ ಲಾಡು ಮತ್ತು ಇತರೆ ಸಿಹಿ ಉತ್ಪನ್ನಗಳನ್ನು ಒಕ್ಕೂಟದ ಎಲ್ಲಾ ಶಾಫಿ, ಎ.ಟಿ.ಎಂ. ಪಾರ್ಲರ್, ಕ್ಷೀರ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ.

ನಿಗದಿತ ಅವಧಿಯಲ್ಲಿ ನಂದಿನಿ ಸಿಹಿ ಉತ್ಪನ್ನಗಳನ್ನು ಖರೀದಿಸಿ ಶೇ.20ರಷ್ಟು ರಿಯಾಯಿತಿ ಪಡೆಯಬಹುದು ಎಂದರು.

ಒಕ್ಕೂಟದ ಮಾರುಕಟ್ಟೆ ವಿಭಾಗ ಮುಖ್ಯಸ್ಥ ಜಿ.ಬಿ.ಉದಯಕುಮಾರ ಅವರು ಮಾತನಾಡಿ, ರೈತರ ಹಿತ ರಕ್ಷಣೆ ಮಾಡುವುದು. ಗ್ರಾಹಕರಿಗೆ ತಾಜಾ ಹಾಗೂ ಪರಿಶುದ್ಧವಾದ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡುವುದು ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ಕಲಬೆರಕೆ ಹಾಲಿನಿಂದ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ನಂದಿನಿ ಹಾಲಿನ ವಿವಿಧ ಮಾದರಿಯ ಹಾಲು ನಂದಿನಿ ಶುಭಂ, ನಂದಿನಿ ಸ್ಪೆಷಲ್ ಹಾಲು, ನಂದಿನಿ ಶುಭಂ ಗೋಲ್ಡ್ ಹಾಗೂ ನಂದಿನಿ ಹಾಲನ್ನು ಬಳಸುವಂತೆ ತಿಳಿಸಿದರು.

ಬೂದುಗುಪ್ಪ ಡೇರಿ ಘಟಕದಲ್ಲಿ ಉತ್ಪಾದಿಸಲಾಗುತ್ತಿರುವ ನಂದಿನಿ ತೃಪ್ತಿ ಹಾಲನ್ನು ರೆಫ್ರಿಜರೇಟರ್ ಸಹಾಯವಿಲ್ಲದೇ 90 ದಿನಗಳ ಕಾಲ ತೆರೆದ ಜಾಗದಲ್ಲಿ ಕೆಡದಂತೆ ಇಡಲು ಅವಕಾಶವಿರುವುದರಿಂದ ಹಾಲನ್ನು ಉಪಯೋಗಿಸಬಹುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ಎಸ್.ವೆಂಕಟೇಶ್ ಗೌಡ, ಖರೀದಿ ವಿಭಾಗದ ಉಪ ವ್ಯವಸ್ಥಾಪಕ ಐ.ಎನ್.ಮುರಳೀಧರ ಹಾಗೂ ವಿವಿಧ ವಿಭಾಗಗಳ ಉಪ ವ್ಯವಸ್ಥಾಪಕರಾದ ನಾಗರಾಜ ಶರ್ಮ ಹಾಜರಿದ್ದರು.

ಶಂಬು ಕುಮಾರ್, ವೆಂಕಟೇಶ್ ಜವಳಿ, ಕ.ಹಾ.ಮ.ದ ಡಿಪೋ ಇನ್‍ಚಾರ್ಜ್ ತಿಪ್ಪೇಸ್ವಾಮಿ ಸೇರಿದಂತೆ ಮಾರುಕಟ್ಟೆ ವಿಭಾಗದ ಸಿಬ್ಬಂದಿಗಳಾದ ಸಿ.ಎನ್.ಮಂಜುನಾಥ, ಬಾಬು.ಬಿ ಮತ್ತು ನಂದಿನಿ ಎ.ಟಿ.ಎಂ ಡೀಲರ್ ಹೆಚ್.ಲಕ್ಷ್ಮಿ ಹಾಗೂ ಇತರರು ಇದ್ದರು.

Share this article!

Leave a Reply

Your email address will not be published. Required fields are marked *

error: Content is protected !!