ಜಿಲ್ಲಾ ಕೌಶಲ್ಯಾಭಿವೃದ್ಧಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖೆ ವತಿಯಿಂದ ನಿನ್ನೆ (ಅಗಸ್ಟ್ 10) ಮಿನಿ ಉದ್ಯೋಗ ಮೇಳ ವನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಅವರು ಉದ್ಘಾಟಿಸಿದರು.
ನಂತರ ಅವರು ಮಾತನಾಡಿ, ಮುಮ್ಮಿಗಟ್ಟಿ, ಕೊಟೂರು ಮತ್ತು ಬೇಲೂರು ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಸುಮಾರು 1050 ಏಕರೆಯಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲಿವೆ.
ಬೆಂಗಳೂರು ಮುಂಬಯಿ ಇಂಡಸ್ಟ್ರಿಯಲ್ ಕಾರಿಡಾರು ತಯಾರಿಸುವ ಯೋಜನೆಯಿದ್ದು, ಅಂದಾಜು 5200 ಎಕರೆಯ ಭೂ ಸ್ವಾಧೀನ ಪ್ರಕ್ರೀಯೆ ಜಾರಿಯಲ್ಲಿದೆ.
ಇದರಿಂದ ಅತಿ ದೊಡ್ಡ ಇಂಡಸ್ಟ್ರೀಯಲ್ ಕ್ಲಸ್ಟರ್ ಧಾರವಾಡದಲ್ಲಿ ರೂಪುಗೊಳ್ಳಲಿದೆ. ಸದ್ಯ ವಿವಿಧ ಕೈಗಾರಿಕೋಧ್ಯಮಗಳಿಂದ ಸುಮಾರು 300 ಉದ್ಯೋಗಾವಕಾಶಗಳು ಲಭ್ಯವಿದೆ.
ಇದರ ಸದುಪಯೋಗವನ್ನು ಪಡೆದುಕೊಳ್ಳಲು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಮಿನಿ ಉದ್ಯೋಗ ಮೇಳ ಕ್ಕೆ ಆಗಮಿಸಿದ ಅಭ್ಯರ್ಥಿಗಳಿಗೆ ತಿಳಿಸಿದರು.
ಧಾರವಾಡದ ಸಿಡಾಕ್ ಬೇಲೂರು ಇಂಡಸ್ಟ್ರಿಯಲ್ ಪ್ರದೇಶದಲ್ಲಿ ಮಿನಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಾ.ಚಂದ್ರಪ್ಪ, ಸಹಾಯಕ ಸಾಂಖಿಕ ಅಧಿಕಾರಿ ಎ.ಎಂ.ಶೆಟ್ಟರ್, ಅಭಿಯಾನ ವ್ಯವಸ್ಥಾಪಕ ಡಾ.ರವಿ ಮುನವಳ್ಳಿ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಹೇಂದ್ರ ಲದ್ದಡ, ಹಾಗೂ ಶ್ರೀಕಾಂತ ತಿಟೆ ಮುಂತಾದವರು ಉಪಸ್ಥಿತರಿದ್ದರು.