ನಾಳೆಯಿಂದ ಚೌಲ್ಟ್ರಿ, ಫಂಕ್ಷನ್ ಹಾಲ್ ಗಳಲ್ಲಿ ಮದುವೆಗೆ ಅನುಮತಿ

ಜೂನ್ 28 ರಿಂದ ಮದುವೆ ಸಮಾರಂಭಗಳನ್ನು ಚೌಲ್ಟ್ರಿ, ಹೋಟೆಲ್, ಫಂಕ್ಷನ್ ಹಾಲ್ ಗಳಲ್ಲಿ ಜರುಗಿಸಲು ಅನುಮತಿ ನೀಡಿ, ಜಿಲ್ಲಾಧಿಕಾರಿ ನಿತೇಶ ಪಾಟೀಲ ಆದೇಶ ನೀಡಿದ್ದಾರೆ.

ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಮತ್ತು ಸಾರ್ವಜನಿಕ ಆರೋಗ್ಯ ಕಾಪಾಡುವ ಹಿತದೃಷ್ಠಿಯಿಂದ ಜೂನ್ 21 ರಿಂದ ಜುಲೈ 5 ರ ವರೆಗೆ ಲಾಕ್‍ಡೌನ್ ಜಾರಿಯಲ್ಲಿದ್ದು, ಸಾರ್ವಜನಿಕರಿಗೆ ಈಗಾಗಲೇ ಮನೆಯಲ್ಲಿ ಮದುವೆ ಸಮಾರಂಭಗಳನ್ನು ಜರುಗಿಸಲು ಅನುಮತಿ ನೀಡಲಾಗಿದ್ದು, ಸರಕಾರದ ನಿರ್ದೇಶನದಂತೆ ಈಗ ಮದುವೆಗಳನ್ನು ಚೌಲ್ಟ್ರಿ, ಹೋಟೆಲ್, ಫಂಕ್ಷನ್ ಹಾಲ್ ಗಳಲ್ಲಿ  ಆಯೋಜಿಸಲು ಅನುಮತಿ ನೀಡಿ,  ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಇಂದು ಆದೇಶಿಸಿದ್ದಾರೆ.

ಅನುಮತಿಗಾಗಿ www.supportdharwad.in ನಲ್ಲಿ ಆಧಾರ ಕಾರ್ಡ ಹಾಗೂ ಮದುವೆಯ ಕಾರ್ಡನೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5-30 ರೊಳಗಾಗಿ ಮದುವೆ ನಡೆಯುವ ಮೂರು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬಹುದಾಗಿದೆ.

ಜಿಲ್ಲಾಧಿಕಾರಿಗಳ ಕಾರ್ಯಾಲಯದಿಂದ www.supportdharwad.in ನ ಮೂಲಕ ನೀಡಲಾದ ಅನುಮತಿ ಪತ್ರ ಪಡೆದ ನಂತರ ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಸಂಬಂಧಿಸಿದಂತೆ ವಲಯ ಸಹಾಯಕ ಆಯುಕ್ತರಗಳಿಂದ ಹಾಗೂ ತಾಲೂಕುಗಳ ಗ್ರಾಮೀಣ ಪ್ರದೇಶಕ್ಕೆ ಸಂಬಂಧಿಸಿದಂತೆ ಆಯಾ ತಾಲೂಕುಗಳ ತಹಶೀಲ್ದಾರುಗಳಿಂದ 40 ಜನರಿಗೆ ಗುರುತಿನ ಪತ್ರವನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!