ತೋಟಗಾರಿಕಾ ಇಲಾಖೆಯು 2021-22 ನೇ ಸಾಲಿನ ಹವಾಮಾನ ಆಧಾರಿತ ಮಾವಿನ ಬೆಳೆಗೆ ಬೆಳೆ ವಿಮೆ ಮಾಡಿಸಲು ನವೆಂಬರ್ 15 ಕೊನೆಯ ದಿನವಾಗಿದೆ.
ಎಲ್ಲಾ ಮಾವು ಬೆಳೆಗಾರರು ನಿಗದಿತ ಅವಧಿಯೊಳಗೆ ಪಹಣಿ, ಬ್ಯಾಂಕ್ ಪಾಸ್‍ಬುಕ್, ಆಧಾರ ಕಾರ್ಡ ಹಾಗೂ ಇತರೆ ದಾಖಲೆಗಳೊಂದಿಗೆ ಸಂಬಂಧಪಟ್ಟ ಬ್ಯಾಂಕ್‍ಗಳಿಗೆ ಭೇಟಿ ನೀಡಿ ವಿಮಾ ನೊಂದಣಿ ಮಾಡಿಕೊಳ್ಳಬೇಕು.
ಪ್ರತಿ ಹೆಕ್ಟೇರ್ ಪ್ರೀಮಿಯಂ ಮೊತ್ತ 4000/- ರೂ. ಆಗಿದೆ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0836-2744376 ಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.