ವಿದ್ಯಾರ್ಥಿನಿಯರಿಗೆ ಕರಾಟೆ, ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ

ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಮಾನ್ಯತೆ ಪಡೆದ ರಕ್ಷಣಾ ಕೌಶಲ್ಯಗಳ ಸಂಸ್ಥೆಗಳ ನುರಿತ ಮತ್ತು ಅರ್ಹ ತರಬೇತಿ ಮಹಿಳಾ ತರಬೇತಿದಾರರನ್ನು ಹೊಂದಿರುವ ಸಂಸ್ಥೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6 ರಿಂದ 11ನೇ ತರಗತಿ ವಿದ್ಯಾರ್ಥಿನಿಯರಿಗೆ ಕರಾಟೆ ಮತ್ತು ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ನೀಡಲು ಆಯೋಜಿಸಲಾಗಿದೆ.

ಮಾನ್ಯತೆ ಪಡೆದ ಅರ್ಹ ತರಬೇತಿ ಸಂಸ್ಥೆಯವರು ಧಾರವಾಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ, ಡಿ.ಜಿ. ಶೆಟ್ಟಿ ಶಿಕ್ಷಣ ಸಂಸ್ಥೆಗಳ ಕಟ್ಟಡ, 3ನೇ ಮಹಡಿ, ಕೆಎಂಎಫ್ ಹಿಂದುಗಡೆ, ಲಕ್ಕಮನಹಳ್ಳಿ, ಧಾರವಾಡ ಇಲ್ಲಿ ಡಿಸೆಂಬರ್ 06 ರೊಳಗೆ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗಾಗಿ 9964834541, 8050189506 ಸಂಪರ್ಕಿಸಬಹುದೆಂದು ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this article!

Leave a Reply

Your email address will not be published. Required fields are marked *

error: Content is protected !!