ಅಂತರಾಷ್ಟ್ರೀಯ ಪತ್ರಗಳನ್ನು ಕಳುಹಿಸುವ ಗ್ರಾಹಕರ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಧಾರವಾಡ ಮತ್ತು ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ (IMBC) ವನ್ನು ವಿಶೇಷವಾಗಿ ಪ್ರಾರಂಭಿಸಲಾಗಿದೆ.
ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೌಂಟರ್ (IMBC) ಅನ್ನು ಉತ್ತರ ಕರ್ನಾಟಕ ವಲಯದಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಮೊದಲಬಾರಿಗೆ ಪ್ರಾರಂಭಿಸಲಾಗಿದೆ.
IMBC ಕೌಂಟರ್ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಆದ ಡಾ. ಎನ್. ವಿನೋದಕುಮಾರ್ ಅವರು ದಿನಾಂಕ 02.09.2021 ರಂದು ಉದ್ಘಾಟಿಸಿದರು.
ಇದರಲ್ಲಿ ಪಾರ್ಸಲ್ ಪ್ಯಾಕಿಂಗ್ ವ್ಯವಸ್ಥೆಯೂ ಇದ್ದು ಅಂಚೆ ಇಲಾಖೆಯಲ್ಲಿ ಉತ್ತಮ ಗುಣಮಟ್ಟದ ಪಾರ್ಸೆಲ್ ಸೇವೆ ಲಭ್ಯವಿರುವುದರಿಂದ ಗ್ರಾಹಕರು ಈ ಸೇವೆಯ ಸದುಪಯೋಗ ಪಡೆದುಕೊಳ್ಳಬೇಕೆಂದು ಪೋಸ್ಟ್ ಮಾಸ್ಟರ್ ಜನರಲ್ ಡಾ. ಎನ್. ವಿನೋದ್ ಕುಮಾರ್ ವಿನಂತಿಸಿದರು.
ಅಂತರಾಷ್ಟ್ರೀಯ ಮೇಲ್ ಬುಕಿಂಗ್ ಕೇಂದ್ರವು ವಿದೇಶಗಳಿಗೆ ಪಾರ್ಸಲ್ ಕಳುಹಿಸುವ ಗ್ರಾಹಕರಿಗೆ ಪಾರ್ಸೆಲ್ ಪ್ಯಾಕಿಂಗ್, ಬುಕಿಂಗ್, ಟ್ರ್ಯಾಕಿಂಗ್ ಸೇವಾ ಸೌಲಭ್ಯ ಒದಗಿಸುವ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಪೋಸ್ಟ್ ಮಾಸ್ಟರ್ ಅವರನ್ನು ಅಥವಾ IMBC ಹುಬ್ಬಳ್ಳಿ ಕಚೇರಿಯನ್ನು 0836-2221602 (ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ), 0836-2441806 (ಧಾರವಾಡ ಪ್ರಧಾನ ಅಂಚೆ ಕಚೇರಿ), 0836-2440442 (ಹಿರಿಯ ಅಂಚೆ ಅಧೀಕ್ಷಕರ ಕಚೇರಿ, ಧಾರವಾಡ) ದೂರವಾಣಿ ಮುಖಾಂತರ ಸಂಪರ್ಕಿಸಲು ತಿಳಿಸಲಾಗಿದೆ.
ಕಾರ್ಯಕ್ರಮದಲ್ಲಿ ಎಸ್. ವಿಜಯನರಸಿಂಹ, ಸಹಾಯಕ ನಿರ್ದೇಶಕರು, ಉತ್ತರ ಕರ್ನಾಟಕ ವಲಯ, ಧಾರವಾಡ, ವಿ.ಎಸ್.ಎಲ್. ನರಸಿಂಹ ರಾವ್, ಹಿರಿಯ ಅಂಚೆ ಅಧೀಕ್ಷಕರು, ಆಯ್.ಆರ್. ಮುತ್ನಾಳಿ ಹಾಜರಿದ್ದರು.
ಸಹಾಯಕ ಅಂಚೆ ಅಧೀಕ್ಷಕರು, ಧಾರವಾಡ, ಆರ್.ಡಿ. ದುರ್ಗಾಯಿ, ಸೀನಿಯರ್ ಪೋಸ್ಟ್ ಮಾಸ್ಟರ್, ಹುಬ್ಬಳ್ಳಿ ಪ್ರಧಾನ ಅಂಚೆ ಕಚೇರಿ ಹಾಗೂ ಸುಧಾ ಸತ್ಯನಾರಾಯಣ, ಪೋಸ್ಟ್ ಮಾಸ್ಟರ್ ಧಾರವಾಡ ಪ್ರಧಾನ ಅಂಚೆ ಕಚೇರಿ ಇವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಧಾರವಾಡ ಅಂಚೆ ವಿಭಾಗದ ಫೇಸಬುಕ್ ಪೇಜನ್ನು ಕೂಡ ಡಾ. ಎನ್. ವಿನೋದಕುಮಾರ್, ಪೋಸ್ಟ್ ಮಾಸ್ಟರ್ ಜನರಲ್, ಉತ್ತರ ಕರ್ನಾಟಕ ವಲಯ, ಧಾರವಾಡ ಇವರು ಧಾರವಾಡ ಪ್ರಧಾನ ಅಂಚೆ ಕಚೇರಿಯಲ್ಲಿ ಇಂದು ಲೋಕಾರ್ಪಣೆ ಮಾಡಿದರು.
ಎಲ್ಲ ಗ್ರಾಹಕರು ಫೇಸ್‍ಬುಕ್ ಪೇಜ್ ಗೆ ಭೇಟಿ ನೀಡಿ ತಮ್ಮ ಅಭಿಪ್ರಾಯ ತಿಳಿಸಲು ವಿನಂತಿಸಲಾಗಿದೆ.