ಗ್ರಿಹ ಕೌನ್ಸಿಲ್ ಪ್ರಾಜೆಕ್ಟ್ ಪ್ಯಾಸಿವ್ ಆರ್ಕಿಟೆಕ್ಚರ್ ಡಿಸೈನ್ ವಿಭಾಗದಡಿಯಲ್ಲಿ ಐಐಟಿ ಧಾರವಾಡದ ಖಾಯಂ ಕ್ಯಾಂಪಸನ್ನು ಅನುಕರಣಾರ್ಹ ಕಾರ್ಯಕ್ಷಮತೆ ಪ್ರಶಸ್ತಿಗಳಲ್ಲಿ ಮೊದಲ ರನ್ನರ್ ಅಪ್ ಎಂದು ಘೋಷಿಸಿದೆ.
ಐಐಟಿ ಧಾರವಾಡ, ಹಸಿರು ಮತ್ತು ಸ್ಮಾರ್ಟ್ ಪರಿಸರ ಸ್ನೇಹಿ ಶಾಶ್ವತ ಕ್ಯಾಂಪಸ್ ನಿರ್ಮಿಸುತ್ತಿದೆ. ವಿದ್ಯುತ್ ಶಕ್ತಿಯ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಹವಾನಿಯಂತ್ರಣದ ಅವಶ್ಯಕತೆಗಳನ್ನು ಕಡಿಮೆ ಮಾಡುವ ವಿನ್ಯಾಸದಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ.
ಪ್ಯಾಸಿವ್ಸೋಲಾರ್ ವಾಸ್ತಿಶಿಲ್ಪ ಪರಿಣಾಮಕಾರಿ ಶಾಖ ನಿರೋಧಕಗಳ ಬಳಕೆ, ಪರಿಣಾಮಕಾರಿ ಗಾಜಿನ ಬಳಕೆ, ನೆರಳು ಒದಗಿಸುವ ಸಾಧನಗಳು ಇತ್ಯಾದಿಗಳನ್ನು ಬಳಸಿಕೊಂಡು ಹಗಲಿನ ಬೆಳಕನ್ನು ಗರಿಷ್ಠಗೊಳಿಸಲು ಕಟ್ಟಡಗಳನ್ನು ವಿನ್ಯಾಸಗಳಿಸುವ ಮೂಲಕ ವಿದ್ಯುತ್ ಶಕ್ತಿಯ ಬಳಕೆಯನ್ನು ಕಡಿಮೆಗೊಳಿಸಲಾಗುತ್ತಿದೆ.
ಕಟ್ಟಡಗಳ ಒಳಗೆ ಮತ್ತು ಹೊರಗೆ ಇಂಧನ ದಕ್ಷತೆಯ ಬಲ್ಬ್ ಫಿಟ್ಟಿಂಗ್‍ಗಳ ಬಳಕೆಯಿಂದ ವಿದ್ಯುತ್ ಬಿಲ್‍ಗಳ ಹೊರೆಗಳು ಮತ್ತಷ್ಟು ಕಡಿಮೆಯಾಗುತ್ತವೆ.
ಯುಟಿಲಿಟಿ ಉಪಕರಣಗಳ ಕನಿಷ್ಠ ದಕ್ಷತೆಯನ್ನು ಆಯ್ಕೆ ಮಾಡಲಾಗಿದೆ ಮತ್ತು ಇಸಿಬಿಸಿ 2017 ಮಾನದಂಡಗಳಿಗೆ ಅನುಗುಣವಾಗಿ ವಿನ್ಯಾಸಗೊಳಿಸಲಾಗಿದೆ. ಸಂಪೂರ್ಣ ಸೌರ ಸ್ಥಾವರ ಸ್ಥಾಪನಾ ಯೋಜನೆಯು ರೇಸ್ಕೋ ಮಾದರಿಯಲ್ಲೇ ಇರುತ್ತದೆ.
ಬೆಳಕಿನ ಶಕ್ತಿಯನ್ನು ಅತ್ಯುತ್ತಮವಾಗಿಸಲು ಹೊರಾಂಗಣ ದೀಪಗಳಿಗೆ ಟೈಮರ್‍ಗಳನ್ನು ಅಳವಡಿಸಲಾಗಿದೆ. ಶಟಲ್ ಸೇವೆಯನ್ನು ಪ್ರಸ್ತುತ ಯೋಜನೆಯ ಸೈಟ್‍ನಲ್ಲಿ ಒದಗಿಸಲು ಪ್ರಸ್ತಾಪಿಸಲಾಗಿದೆ.
ವಿದ್ಯುತ್ ಕಾರುಗಳಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನು ಯೋಜಿಸಲಾಗಿದೆ. ಒಟ್ಟು 2.5 ಮೇ.ವ್ಯಾ.ಪಿ. ಸೋಲಾರ್ ಅಳವಡಿಸುವ ಗುರಿಗಾಗಿ ಶೇ 100% ರಷ್ಟು ಕಟ್ಟಡದ ಮೇಲ್ಚಾವಣೆಗಳನ್ನು, ಪಾರ್ಕಿಂಗ್ ಮೇಲ್ಬಾಗವನ್ನು ಮತ್ತು ಕ್ಯಾಂಪಸ್‍ನ ಗಡಿಯನ್ನು ಉಪಯೋಗಿಸಲಾಗುವುದು.
ಅಕ್ಟೋಬರ್ 2021 ರಲ್ಲಿ ಪ್ಯಾಸಿವ್ ಆರ್ಕಿಟೆಕ್ಚರ್ ಡಿಸೈನ್ ವಿಭಾಗದ ಅಡಿಯಲ್ಲಿ ಅನುಕರಣಾರ್ಹ ಕಾರ್ಯಕ್ಷಮತೆ ಪ್ರಶಸ್ತಿಯನ್ನು ಪರಿಗಣಿಸಲು ಅನುಕರಣಾ ವಿನ್ಯಾಸದ ಆಧಾರದ ಡಾಕ್ಯುಮೆಂಟ್‍ನ್ನು (GRIHA) ಕೌನ್ಸಿಲ್‍ಗೆ ಸಲ್ಲಿಸಲಾಗಿತ್ತು.
ಏಮ್/ಎಸ್. ಪಿಇಸಿ ಸೊಲ್ಯೂಷನ್ಸ್ ಗ್ರೀನ್ ಡಿಸೈನ್ಸ್ ಪ್ರೈವೇಟ್ ಲಿಮಿಟೆಡ್‍ನ ಶ್ರೀಮತಿ ಮಾಲಾ ಸಿಂಗ್ ಐಐಟಿ ಧಾರವಾಡ ಪ್ರಾಜೆಕ್ಟ್ ಹಂತ-1ಎ ಅಭಿವೃದ್ಧಿಯ GRIHA ಪ್ರಮಾಣೀಕರಣಕ್ಕೆ ಸಂಬಂಧಿಸಿದ ಸಲಹೆಗಾರರಾಗಿದ್ದಾರೆ.
(GRIHA) ಕೌನ್ಸಿಲ್‍ನಿಂದ ರಚಿಸಲ್ಪಟ್ಟ ತೀರ್ಪುಗಾರರು ಐಐಟಿ ಧಾರವಾಡದ ಯೋಜನೆಯ ಹಂತ-1 ವಿನ್ಯಾಸ ಪ್ರವೇಶವನ್ನು ಪ್ಯಾಸಿವ್ ಆರ್ಕಿಟೆಕ್ಚರ್ ವಿನ್ಯಾಸಕ್ಕಾಗಿ 4-ಸ್ಟಾರ್‍ನ ದೊಡ್ಡ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಸ್ವೀಕರಿಸಿದ ಹಲವಾರು ನಾಮನಿರ್ದೇಶನಗಳಲ್ಲಿ ಅನುಕರಣಾರ್ಹ ಮೊದಲ ರನ್ನರ್ಸ್ ಅಪ್ ಆಗಿ ಆಯ್ಕೆ ಮಾಡಿದರು.