ಒಂದೂವರೆ ಎಕರೆಯಲ್ಲಿ 25-30 ಕ್ವಿಂಟಾಲ್ ಕರಿಬೇವು: 85 ರಿಂದ 90 ಸಾವಿರ ರೂ. ಆದಾಯ ಪಡೆದ ಮದೀಕೊಪ್ಪದ ರೈತ.
ತೋಟಗಾರಿಕೆ ಇಲಾಖೆ ಮೂಲಕ ಕಳೆದ 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (MGNREGA) ಯೋಜನೆಯಡಿ ಸೌಲಭ್ಯ ಪಡೆದ ಮದೀಕೊಪ್ಪ ಗ್ರಾಮದ ರೈತರಾದ ಮೌಲಾಲಿ ಮಕ್ತುಮಸಾಬ ಬೇವಿನಮರದ ಅವರು 1 ಎಕರೆ 20 ಗುಂಟೆ ಪ್ರದೇಶದಲ್ಲಿ ಕರಿಬೇವು ಬೆಳೆ ಹೊಸ ತೋಟ ನಿರ್ಮಿಸಿಕೊಂಡು ಆರು ತಿಂಗಳ ಅವಧಿಯಲ್ಲಿ 25 ರಿಂದ 30 ಕ್ವಿಂಟಾಲ್ ಕಟಾವು ಮಾಡಿ ಸುಮಾರು 85 ರಿಂದ 90 ಸಾವಿರ ರೂ.ಗಳ ಆದಾಯ ಪಡೆದಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹೊಸತೋಟ ನಿರ್ಮಿಸಿಕೊಳ್ಳಲು ಕೂಲಿ ವೆಚ್ಚವಾಗಿ ರೂ.1,07,013/-, ಹಾಗೂ ಸಾಮಗ್ರಿ ವೆಚ್ಚವಾಗಿ ರೂ.16,820/- ಅನುದಾನವನ್ನು ತೋಟಗಾರಿಕೆ ಇಲಾಖೆಯಿಂದ ಪಡೆದು 389 ಮಾನವ ದಿನಗಳನ್ನು ಸೃಜಿಸಿದ್ದಾರೆ.
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಲಾಭವನ್ನು ಧಾರವಾಡ ತಾಲ್ಲೂಕಿನ ಎಲ್ಲ ಸಣ್ಣ, ಅತೀ ಸಣ್ಣ ರೈತರು ಪಡೆದುಕೊಳ್ಳಬೇಕೆಂದು ಪ್ರಕಟಣೆ ತಿಳಿಸಿದೆ.
ಯೋಜನೆಯ ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಶಿವಯೋಗಪ್ಪ-9743518608, ಅಮ್ಮಿನಬಾವಿ ಹೋಬಳಿ ಅಧಿಕಾರಿ ಮಹೇಶ ಪಟ್ಟಣಶೆಟ್ಟಿ-9916114535, ಧಾರವಾಡ ಹೋಬಳಿ ಅಧಿಕಾರಿ ಯಲ್ಲಮ್ಮ ಐರಣಿ-9591164754, ಗರಗ ಹೋಬಳಿ ಅಧಿಕಾರಿ ದೀಪ್ತಿ ವಾಲಿ-8296482663– ಅವರನ್ನು ಸಂಪರ್ಕಿಸಬಹುದು