ಪಂಡಿತ್ ಬಸವರಾಜ ರಾಜಗುರು ಅವರ 30ನೇ ಪುಣ್ಯತಿಥಿ ಆಚರಣೆ

ಹೊಸಯಲ್ಲಾಪುರ ಓಣಿ ಹಿರೇಮಠದ ಆವರಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ವತಿಯಿಂದ ಇಂದು ಬೆಳಿಗ್ಗೆ ಸ್ವರ ಸಾಮ್ರಾಟ ಪಂಡಿತ್ ಬಸವರಾಜ ರಾಜಗುರು ಅವರ 30ನೇ ವರ್ಷದ ಹಾಗೂ ಗಂಗೂಬಾಯಿ ಹಾನಗಲ್ ಅವರ 12ನೇ ವರ್ಷದ ಪುಣ್ಯತಿಥಿಯನ್ನು ಸರಳವಾಗಿ ಆಚರಿಸಲಾಯಿತು.

ಹಿರೇಮಠದ ಮಹಾಸ್ವಾಮಿಗಳಾದ ಪಟ್ಟದ ಗದಗಯ್ಯ ಸ್ವಾಮಿಗಳ ಸಾನಿಧ್ಯದಲ್ಲಿ, ಧಾರವಾಡ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಪಂಡಿತ್ ಬಸವರಾಜ ರಾಜಗುರು ಅವರ  ಸಮಾಧಿಗೆ  ಪುಷ್ಪಾರ್ಪಣೆ  ಮಾಡಿ ನಮಿಸಿದರು.

 ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಪಂಡಿತ ಬಸವರಾಜ ರಾಜಗುರು ರಾಷ್ರ್ಟೀಯ ಸ್ಮಾರಕ ಟ್ರಸ್ಟ್‌ ಅಧ್ಯಕ್ಷರಾದ  ಚಂದ್ರಕಾಂತ ಬೆಲ್ಲದ, ಬಸವರಾಜ ರಾಜಗುರು ಅವರ ಪತ್ನಿ ಭಾರತಿದೇವಿ ರಾಜಗುರು, ಮಗ ನಿಜಗುಣ ರಾಜಗುರು, ಮೊಮ್ಮಗ ವಿಶ್ವರಾಜ ರಾಜಗುರು ಉಪಸ್ಥಿತರಿದ್ದರು.

ಟ್ರಸ್ಟ್ ಸದಸ್ಯರಾದ ಡಾ.ಜಿ.ಎಮ್.ಹೆಗಡೆ, ಡಾ.ಉದಯಕುಮಾರ ದೇಸಾಯಿ,ಕನ್ನಡ ಮತ್ತು ಸಂಸ್ಕೃತ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ ಯಲಿಗಾರ, ಶಂಕರ ಕುಂಬಿ ಸೇರಿದಂತೆ  ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು.

Share this article!

Leave a Reply

Your email address will not be published. Required fields are marked *

error: Content is protected !!