ಬಳ್ಳಾರಿ, ಬೀದರ್, ಕಲಬುರಗಿ ಮತ್ತು ಬೆಳಗಾವಿಯ ಸರಕಾರಿ ಪ್ರೌಢಶಾಲೆಗಳಿಗೆ ಧಾರವಾಡ ವಿಶ್ವವಿದ್ಯಾಲಯದಿಂದ ವಿಜ್ಞಾನ ಲ್ಯಾಬ್ ಕಿಟ್ ಗಳನ್ನು ಕಳಿಸಲು ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹಸಿರು ನಿಶಾನೆ ತೋರಿದರು.
ಧಾರವಾಡ ವಿಶ್ವವಿದ್ಯಾಲಯದ ವಿಜ್ಞಾನ ಉಪಕರಣ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ, ಬಳ್ಳಾರಿ ಜಿಲ್ಲೆ ಸರಕಾರಿ ಪ್ರೌಢಶಾಲೆಗಳಿಗೆ 1.11 ಕೋಟಿ ರೂ. ವೆಚ್ಚದ 199 ವಿಜ್ಞಾನ ಲ್ಯಾಬ್ ಕಿಟ್ ಗಳನ್ನು ಕಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಬೀದರ್ ಜಿಲ್ಲೆಯ ಶಾಲೆಗಳಿಗೆ 45 ಲಕ್ಷ ರೂ. ವೆಚ್ಚದಲ್ಲಿ 46 ಲ್ಯಾಬ್ ಕಿಟ್ಗಳನ್ನು ಹಾಗೂ ಬೆಳಗಾವಿ ಜಿಲ್ಲೆಯ 20 ಸರಕಾರಿ ಪ್ರೌಢಶಾಲೆಗಳಿಗೆ ಹಾಗೂ ಕಲಬುರಗಿ ವಿಭಾಗದ 10 ಸರಕಾರಿ ಪ್ರೌಢಶಾಲೆಗಳಿಗೆ 30ಲಕ್ಷ ರೂ. ವೆಚ್ಚದಲ್ಲಿ ಲ್ಯಾಬ್ ಕಿಟ್ಗಳನ್ನು ಕಳಿಸಲಾಗುತ್ತಿದೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
ಇದೇ ವೇಳೆ ವಿವಿಯ ಕ್ಯಾಂಪಸ್ನಲ್ಲಿ ನಡೆಯುತ್ತಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿ ಡಿಸಿಎಂ ಪರಿಶೀಲನೆ ನಡೆಸಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಸವರಾಜ ಇದ್ದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕರಾದ ಅರವಿಂದ ಬೆಲ್ಲದ, ಎಸ್.ವಿ.ಸಂಕನೂರು ಮತ್ತಿತರರು ಇದ್ದರು.