ಪಶುಪಾಲನಾ ಇಲಾಖಾ ವತಿಯಿಂದ 2022-23ನೇ ಸಾಲಿನ ಅನುಸೂಚಿತ ಜಾತಿ, ಪಂಗಡಗಳ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ) ಉಪಯೋಜನೆ ಕಾಯ್ದೆ 2013 ರಡಿ ಒಂದು ಮಿಶ್ರತಳಿ ಹಸು, ಸುಧಾರಿತ ತಳಿ ಎಮ್ಮೆ ಘಟಕ ಅಥವಾ 10+1 ಕುರಿ, ಮೇಕೆ ಘಟಕಗಳನ್ನು ಸ್ಥಾಪಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮದಡಿ ಒಂದು ಮಿಶ್ರತಳಿ ಹಸು, ಸುಧಾರಿತ ತಳಿ ಎಮ್ಮೆ ಘಟಕ ಸ್ಥಾಪಿಸಲು ಘಟಕ ವೆಚ್ಚ ರೂ.60,000/- ಇದ್ದು ಸಹಾಯಧನ (ಶೇ.90%) ರೂ.54,000/- ಸಿಗುತ್ತದೆ.
ಫಲಾನುಭವಿಗಳ ವಂತಿಕೆ ರೂ.6,000/-ಗಳು ಅಥವಾ 10+1 ಕುರಿ, ಮೇಕೆ ಘಟಕ ಸ್ಥಾಪಿಸಲು ಘಟಕ ವೆಚ್ಚ ರೂ.66,000/- ಇದ್ದು ಸಹಾಯಧನ (ಶೇ.90%) ರೂ.59,400/- ಫಲಾನುಭವಿಗಳ ವಂತಿಕೆ ರೂ.6,600/-ಗಳೊಂದಿಗೆ ಯೋಜನೆ ಅನುಷ್ಟಾನಗೊಳಿಸಲಾಗುವುದು.
ತಾಲ್ಲೂಕುವಾರು, ವರ್ಗವಾರು ಗುರಿಗಳನ್ನು ನಿಗದಿಪಡಿಸಲಾಗಿದೆ. ಫಲಾನುಭವಿಗಳ ವಂತಿಕೆ (ಶೇ.10%) ರೂ.6000/- ಹಾಗೂ ರೂ.6600/- ಗಳನ್ನು ಅರ್ಜಿಯೊಂದಿಗೆ ಪಾವತಿಸಬೇಕಾಗಿರುತ್ತದೆ.
ಆಯ್ಕೆಯಾಗದಿದ್ದ ಪಕ್ಷದಲ್ಲಿ ಫಲಾನುಭವಿ ಪಾಲಿನ ವಂತಿಕೆ ಮೊತ್ತವನ್ನು ಹಿಂದಿರುಗಿಸಲಾಗುವುದು.
ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ವಿಧಾನಸಭಾ ಸದಸ್ಯರ ಅಧ್ಯಕ್ಷತೆಯಲ್ಲಿ ಚಾಲ್ತಿಯಲ್ಲಿರುವ ಸರ್ಕಾರದ ಮಿಸಲಾತಿ ನಿಯಮಗಳನ್ವಯ ಫಲಾನುಭವಿಗಳನ್ನು ಆಯ್ಕೆ ಮಾಡಿ ಯೋಜನೆ ಅನುಷ್ಠಾನಗೊಳಿಸಲಾಗುವುದು.
ಅರ್ಜಿ ಸಲ್ಲಿಸಲು ಅರ್ಜಿದಾರರು ಐಡಿ ಪ್ರೂಫ (ಗುರುತಿನ ಸಂಖ್ಯೆ) ಹಾಗೂ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಸಲ್ಲಿಸಲು ಡಿಸೆಂಬರ್ 31-12-2022 ಕೊನೆಯ ದಿನವಾಗಿದೆ.
ಅರ್ಜಿಗಳಿಗೆ ಮತ್ತು ಹೆಚ್ಚಿನ ಮಾಹಿತಿಗಾಗಿ ಧಾರವಾಡ ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿಗಳು- 9449541722, ಹುಬ್ಬಳ್ಳಿ-9844187842, ಕಲಘಟಗಿ-9880867636, ಕುಂದಗೋಳ-9482182434), ನವಲಗುಂದ-9448222045 ಇವರುಗಳ ಕಛೇರಿಗೆ ಸಂಪರ್ಕಿಸಬಹುದು.
ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಜಿಲ್ಲೆಯ ರೈತರಲ್ಲಿ ಉಪನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.