ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಸದಸ್ಯತ್ವ ನೋಂದಣಿಗೆ ಡಿ.22 ಕೊನೆ ದಿನ

ಹುಬ್ಬಳ್ಳಿಯ ಅಂಜುಮನ್ -ಎ- ಇಸ್ಲಾಂ, ವಕ್ಫ್ ಸಂಸ್ಥೆಯ ಆಡಳಿತ ಸಮಿತಿ ರಚನೆಗಾಗಿ ಸಾಮಾನ್ಯ ಸದಸ್ಯರ ನೋಂದಣಿ ಪ್ರಕ್ರಿಯೆ ಅಧಿಸೂಚನೆ ಈಗಾಗಲೇ ಹೊರಡಿಸಿದ್ದು, ಡಿಸೆಂಬರ್ 22 ಕೊನೆಯ ದಿನವಾಗಿದೆ.

ಹೊಸದಾಗಿ ಸದಸ್ಯರಾಗಲು ಈಗಾಗಲೇ ಹೊರಡಿಸಿರುವ ಅಧಿಸೂಚನೆಯಂತೆ ಅರ್ಜಿಗಳನ್ನು ಸಲ್ಲಿಸಬೇಕು.

ಈ ಹಿಂದೆ ವಕ್ಫ್ ಸಂಸ್ಥೆಯ ಸದಸ್ಯತ್ವ ಹೊಂದಿರುವವರು ಕೂಡಾ ಹೊಸದಾಗಿ ಅರ್ಜಿ ಹಾಗೂ ಪ್ರಸ್ತುತ ವರ್ಷದ ಮಾಸಿಕ ವಂತಿಗೆ ಮತ್ತು ಗುರುತಿನ ಚೀಟಿಯ ಶುಲ್ಕವನ್ನು ಪಾವತಿಸಬೇಕಾಗಿರುತ್ತದೆ.

ಅರ್ಜಿಯೊಂದಿಗೆ ಮಾಸಿಕ ವಂತಿಗೆ ಹಾಗೂ ಈ ಹಿಂದೆ ಸಂಸ್ಥೆಯವರು ನೀಡಿರುವ ಗುರುತಿನ ಚೀಟಿ ಹಾಗೂ ಸರ್ಕಾರದಿಂದ ಹೊಂದಿರುವ ಯಾವುದಾದರೂ ಒಂದು ಗುರುತಿನ, ವಿಳಾಸದ ಚೀಟಿಯನ್ನು ಸ್ವತಃ ಹಾಜರಾಗಿ ಸಲ್ಲಿಸಬೇಕೆಂದು ವಕ್ಫ್ ಅಧಿಕಾರಿಯೂ ಆಗಿರುವ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಕೇರ್ ಟೇಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  

Share this article!

Leave a Reply

Your email address will not be published. Required fields are marked *

error: Content is protected !!