ವಿಜಯನಗರ ಜಿಲ್ಲೆಯಲ್ಲಿ ಈಗಾಗಲೇ ಮತದಾರ ಚೀಟಿಗೆ ಆಧಾರ ಜೋಡಣೆ ಚಾಲ್ತಿಯಲ್ಲಿರುತ್ತದೆ. ಬಾಕಿ ಉಳಿದ ಮತದಾರರ ತಮ್ಮ ಮತದಾರ ಗುರುತಿನ ಚೀಟಿಗೆ ಆಧಾರ ಜೋಡಣೆಗೆ ದಾಖಲೆಗಳನ್ನು ಸಂಬಂಧಪಟ್ಟ, ಮತಗಟ್ಟೆ ಅಧಿಕಾರಿಗೆ ನೀಡಬೇಕು.
ಮನೆ ಮನೆ ಸಮೀಕ್ಷೆ ಸಮಯದಲ್ಲಿ ಆಧಾರ ಸಂಖ್ಯೆಯನ್ನು ಸಹ ಜೋಡಣೆ ಮಾಡಲಾಗುತ್ತಿದ್ದು, ತಮ್ಮ ಆಧಾರ ಸಂಖ್ಯೆಯನ್ನು ಸಿಬ್ಬಂದಿಯವರಿಗೆ ನೀಡಿ ಮತದಾರರ ಚೀಟಿಗೆ ಆಧಾರ ಸಂಖ್ಯೆ ಜೋಡಣೆ ಮಾಡಲು ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಿಳಿಸಿದ್ದಾರೆ.
ಜಿಲ್ಲೆಯ 5 ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಜಿಲ್ಲಾ ವೆಬ್‍ಸೈಟ್ vijayanagara.nic.in ರಲ್ಲಿ ಅಳವಡಿಸಲಾಗಿದೆ.
ಮತದಾರರು ಮತ್ತು ರಾಜಕೀಯ ಪಕ್ಷಗಳು, ಸಾರ್ವಜನಿಕ ಜನಪ್ರತಿನಿಧಿಗಳು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿರುವ ಬಗ್ಗೆ ಪರಿಶೀಲಿಸಿಕೊಂಡು ಖಾತರಿ ಪಡಿಸಿಕೊಳ್ಳಬಹುದು.
ಸಾರ್ವಜನಿಕರು ತಮ್ಮ ಹೆಸರು Voter Helpline App ನಲ್ಲಿ ಪರಿಶೀಲನೆ ಮಾಡಿಕೊಳ್ಳಲು ಅವಕಾಶವಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಲು, ಆಕ್ಷೇಪಣೆಗಳಿಗೆ ಸಂಬಂಧಿಸಿದಂತೆ ಮತಗಟ್ಟೆ ಮಟ್ಟದ ಅಧಿಕಾರಿ, ತಹಶೀಲ್ದಾರ ಕಚೇರಿ ಅಥವಾ ಸಹಾಯಕ ಆಯುಕ್ತರ ಕಚೇರಿಗೆ ಡಿ.08ರವರೆಗೆ ಸಲ್ಲಿಸಲು ಅವಕಾಶ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.