ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಯ ಎಲ್ಲ 82 ಸದಸ್ಯರಿಗೆ ಮೈಸೂರು ಸರಕಾರಿ ತರಬೇತಿ ಕೇಂದ್ರದಲ್ಲಿ ಡಿಸೆಂಬರ್ 27 ಹಾಗೂ 28 ರಂದು ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ತರಬೇತಿಗೆ ಡಿಸೆಂಬರ್ 25 ರಂದು ಸಂಜೆ ಹುಬ್ಬಳ್ಳಿಯಿಂದ ತೆರಳುವುದರಿಂದ ಸದಸ್ಯರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕು.
ನೋಂದಾಯಿಸಿಕೊಂಡ ಸದಸ್ಯರಿಗೆ ಟಿಕೆಟ್ ಹಾಗೂ ಇನ್ನಿತರೆ ವ್ಯವಸ್ಥೆಗಳನ್ನು ಮಾಡಲಾಗುವುದು.
ಮಹಾಪೌರರ ಆಪ್ತ ಸಹಾಯಕರಾದ ಜಗದೀಶ ಗುಡ್ಡದಕೇರಿ ಅವರ ದೂರವಾಣಿ ಸಂಖ್ಯೆ 9886039395 ಸಂಪರ್ಕಿಸುವ ಮೂಲಕ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.