ಕಲಘಟಗಿ ತಾಲೂಕು ನೀರಸಾಗರ ಗ್ರಾಮದಲ್ಲಿ ಆಯೋಜಿಸಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮಕ್ಕೆ ತೆರಳುವಾಗ, ಬರ್ಶಿಕೊಪ್ಪ ಗ್ರಾಮಸ್ಥರು ದಾರಿಯಲ್ಲಿ ನಿಂತು, ಬಹುದಿನಗಳಿಂದ ಸಮಸ್ಯೆಯಾಗಿ ಉಳಿದಿದ್ದ ಗ್ರಾಮದ ಸಂಪರ್ಕ ರಸ್ತೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದ್ದರು.
ಜಿ ಬಸವನಕೊಪ್ಪ ಹಳ್ಳಿ ಇಂದ ಬರ್ಶಿಕೊಪ್ಪ ಗ್ರಾಮಕ್ಕೆ ತೆರಳುವ ರಸ್ತೆ ಅತಿಕ್ರಮಣವಿದ್ದು ರಸ್ತೆ ತೆರವುಗೊಳಿಸಲು ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು.
ಅಂದು ಜಿಲ್ಲಾಧಿಕಾರಿಗಳು ಸ್ವತಃ ಸ್ಥಳದಲ್ಲಿದ್ದು, ಗ್ರಾಮಸ್ಥರ, ರಸ್ತೆ ಅತಿಕ್ರಮಣದಾರರ, ಅಧಿಕಾರಿಗಳ, ರೈತರ ಸಭೆ ಜರುಗಿಸಿ, ಸಂದಾನ ಮಾಡಿದ್ದರು.
ಮತ್ತು ಒತ್ತುವರಿ ತೆರವುಗೊಳಿಸಲು ಸ್ಥಳದಲ್ಲಿಯೇ ಆದೇಶಿಸಿ, ಗ್ರಾಮಸ್ಥರೊಂದಿಗೆ ರಸ್ತೆ ನಿರ್ಮಾಣ ಕಾಮಗಾರಿಗೆ ಪೂಜೆ ನೆರವೇರಿಸಿ, ಚಾಲನೆ ನೀಡಿದ್ದರು.
ಜಿ.ಬಸವನಕೊಪ್ಪದಿಂದ ಬರ್ಶಿಕೊಪ್ಪದ ವರೆಗಿನ ಸುಮಾರು ಮೂರು ಕಿ.ಮಿ. ರಸ್ತೆ ಕಾಮಗಾರಿ ಇಂದು ಪೂರ್ಣಗೊಂಡಿದ್ದು, ಜಿಲ್ಲಾಧಿಕಾರಿಗಳ ನಿರ್ದೇಶನದ ಕಲಘಟಗಿ ತಹಸಿಲ್ದಾರ ಯಲ್ಲಪ್ಪ ಗೋಣೆಣ್ಣನವರ ಸಂಚಾರಕ್ಜೆ ಮುಕ್ತಗೊಳಿಸಿ, ಬರ್ಶಿಕೊಪ್ಪ ಗ್ರಾಮಸ್ಥರಿಗೆ ಸಾಂಕೇತಿಕವಾಗಿ ರಸ್ತೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಉಪ ತಹಸಿಲ್ದಾರ ಬಿ.ಐ.ಅಂಗಡಿ, ಬಿ.ಕೆ.ತಾಂಬ್ರೆನವರ, ಕಂದಾಯ ನಿರೀಕ್ಷಕ ನಾಸಿರ್ ಅಮರಗೋಳ್, ಗ್ರಾಮ ಲೆಕ್ಕಾಧಿಕಾರಿ ಆನಂದ್ ನಾಯಕ್ ಮುಂತಾದವರು ಹಾಜರಿದ್ದರು.
ಆರಕ್ಷಕ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಮತ್ತು ಶಾಲಾ ಮಕ್ಕಳು ಹಾಜರಿದ್ದರು. ರಸ್ತೆ ಅಗಲೀಕರಣ ಮಾಡಿ ತೆರವುಗೊಳಿಸಿ ಕೊಟ್ಟಿದ್ದಕ್ಕೆ ಶಾಲಾ ಮಕ್ಕಳು ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿ, ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಕೃತಜ್ಞತೆ ಸಲ್ಲಿಸಿದರು.