ಹುಬ್ಬಳ್ಳಿ: ಪ್ರಸಕ್ತ ಸಾಲಿನ ಆಸ್ತಿ ತೆರಿಗೆ ಯನ್ನು ಏಪ್ರಿಲ್ 30ರವರೆಗೆ ಶೇ.5 ರಷ್ಟು ರಿಯಾಯತಿಯೊಂದಿಗೆ ಪಾವತಿಸಲು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಅವಕಾಶ ಕಲ್ಪಿಸಲಾಗಿದೆ.
ಜೂನ್ 30ರವರೆಗೆ ದಂಡ ರಹಿತವಾಗಿ ಆಸ್ತಿ ಕರ ಪಾವತಿಸಬಹುದಾಗಿದೆ. ಜುಲೈ 1ರಿಂದ ಪ್ರತಿ ತಿಂಗಳಿಗೆ ಶೇ.2 ರಂತೆ ದಂಡದೊಂದಿಗೆ ಆಸ್ತಿ ತೆರಿಗೆಯನ್ನು ಪಾವತಿಸ ಬೇಕಾಗುತ್ತದೆ.
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವಲಯ ಕಚೇರಿಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆಸ್ತಿ ತೆರಿಗೆ ಚಲನ್ಗಳನ್ನು ವಿತರಿಸಲಾಗುತ್ತದೆ.
ಸಾರ್ವಜನಿಕರು ಆಸ್ತಿ ತೆರಿಗೆಯನ್ನು ಎಚ್ಡಿ-1 ಹಾಗೂ http://www.hdmc.mrc.gov.in ಆನ್ಲೈನ್ ಮುಖಾಂತರ ಪಾವತಿಸಬಹುದು.
ಎಲ್ಲ ವಿಧದ ಯುಪಿಐ ಅಪ್ಲಿಕೇಶನ್ ಮತ್ತು ನೆಫ್ಟ್ ಅಥವಾ ಆರ್ಟಿಜಿಎಸ್ ಮುಖಾಂತರ ಆಸ್ತಿಕರ ತುಂಬಬಹುದಾಗಿದೆ.
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಖಾತೆ ಸಂಖ್ಯೆ 012601000202020, ಯೆಸ್ ಬ್ಯಾಂಕ್ 024981300000014, ಕೆನರಾ ಬ್ಯಾಂಕ್ 2538106003554 ಮತ್ತು ಇಂಡಸ್ಇಂಡ್ ಬ್ಯಾಂಕ್ 100032405328 ಖಾತೆಗಳ ಮೂಲಕ ಆಸ್ತಿಕರ ತುಂಬಲು ಅವಕಾಶ ಕಲ್ಪಿಸಲಾಗಿದೆ.
ಹಿಂದಿನ ವರ್ಷದ ಆಸ್ತಿ ತೆರಿಗೆ ಬಾಕಿ ಪಾವತಿಸದಿದ್ದವರು ಸಹ ತಮ್ಮ ಆಸ್ತಿ ತೆರಿಗೆಯನ್ನು ಕೂಡಲೇ ಪಾವತಿಸುವಂತೆ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.