ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯು ನವೆಂಬರ್ 01 ರಿಂದ ನೋಂದಣಿ ಪ್ರಾರಂಭವಾಗಿದ್ದು, ನೂತನ ಮಾರ್ಗಸೂಚಿಯನ್ವಯ ಮಾಸಿಕ ರೂ.30,000/- ವರೆಗಿನ, ವಾರ್ಷಿಕ ರೂ.3,60,000/- ವರೆಗಿನ ವೇತನ ಪಡೆಯುವ ಖಾಸಗಿ ನೌಕರರು ಯಶಸ್ವಿನಿ ಯೋಜನೆಯಡಿ ನೋಂದಾಯಿಸಿಕೊಳ್ಳಬಹುದು.
ಅಲ್ಲದೇ ಯಶಸ್ವಿನಿ ಕಾರ್ಡ್ ಮಾಡಿಸುವ ಸಹಕಾರ ಸಂಘದ ಸಿಬ್ಬಂದಿಗಳಿಗೆ ಪ್ರೋತ್ಸಾಹಧನ ರೂ.20/- ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಹಕಾರ ಇಲಾಖೆಯ ಸಹಕಾರ ಸಿಂಧು ವೆಬ್ಸೈಟ್ https://sahakarasindhu.karnataka.gov.in ಅನ್ನು ಸಂಪರ್ಕಿಸಬಹುದು.
ಕಚೇರಿ ದೂರವಾಣಿ ಸಂಖ್ಯೆ: 0836-2958634 ಸಂಪರ್ಕಿಸಬಹುದೆಂದು ಧಾರವಾಡ ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕರಾದ ರಂಜನಾ ಟಿ. ಪೋಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.