6 ರಿಂದ 10 ನೇ ತರಗತಿ ವಿದ್ಯಾರ್ಥಿನಿಯರಿಗೆ ಕರಾಟೆ ಸ್ವಯಂ ರಕ್ಷಣಾ ಕೌಶಲ್ಯಗಳ ತರಬೇತಿ ನೀಡಲು ಮಾನ್ಯತೆ ಪಡೆದ ಕರಾಟೆ ಸಂಸ್ಥೆಗಳ ನುರಿತ ಮತ್ತು ಅರ್ಹ ತರಬೇತಿ (ಮಹಿಳಾ ತರಬೇತಿದಾರರನ್ನು ಹೊಂದಿದ) ಸಂಸ್ಥೆಯಿಂದ ಅರ್ಜಿ ಅಹ್ವಾನಿಸಲಾಗಿದೆ.
ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹುಬ್ಬಳ್ಳಿ ತಾಲೂಕಿನ ಛಬ್ಬಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿಯರಿಗೆ ಕರಾಟೆ ಕಲಿಸಬೇಕಾಗುತ್ತದೆ.
ಅರ್ಜಿಯೊಂದಿಗೆ ಸಂಸ್ಥೆಯು ಸರ್ಕಾರದಿಂದ ಮಾನ್ಯತೆ ಪಡೆದ ಕುರಿತು ದೃಢೀಕೃತ ಪ್ರಮಾಣ ಪತ್ರ, ತರಬೇತಿದಾರರ ವಿಳಾಸ ಮತ್ತು ಮೊಬೈಲ್ ನಂಬರ್ ದೃಢೀಕೃತ ಪ್ರತಿ, ತರಬೇತಿದಾರರ ಮೂರು ಭಾವಚಿತ್ರ, ಸರ್ಕಾರದ ಅಧೀಕೃತ ಗುರುತಿನ ಚೀಟಿಯ ಪ್ರತಿ, ತರಬೇತಿದಾರರ ಆಧಾರ ಕಾರ್ಡ ಪ್ರತಿ, ತರಬೇತಿದಾರರಿಗೆ ಪರಿಚಯವಿರುವ ಇಬ್ಬರು ಗಣ್ಯ ವ್ಯಕ್ತಿಗಳ ವಿಳಾಸ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕು.
ಮಾನ್ಯತೆ ಪಡೆದ ಅರ್ಹ ತರಬೇತಿ ಸಂಸ್ಥೆಯವರು ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಛಬ್ಬಿ, ಶ್ರೀ ಮೈತ್ರಿ ಅಸೋಸಿಯೇಶನ್(ರಿ), ಮೈತ್ರಿ ವೃದ್ದಾಶ್ರಮ ಪ್ಲಾಟ್ ನಂ-60 ಸಹ್ಯಾದ್ರಿ ನಗರ, ಕ್ಯಾನ್ಸರ್ ಹಾಸ್ಪಿಟಲ್ ಹಿಂದೆ, ಕೆ.ಹೆಚ್.ಬಿ ಕಾಲೋನಿ, ನವನಗರ, ಹುಬ್ಬಳ್ಳಿ ಡಿಸೆಂಬರ್ 9 ರೊಳಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 99457 49413 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.